ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ನ 16ನೇವಾರ್ಷಿಕ ಮಾಹಸಭೆ,ನೂತನ ಸಮಿತಿ ರಚನೆ

0

ಪೈಚಾರು ಅಲ್ ಅಮೀನ್ ಯೂತ್ ಸೆಂಟರ್ ಇದರ 16ನೇ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನಾ ಸಭೆ ಆಗಸ್ಟ್ 6 ರಂದು ಖುವ್ವತ್ತುಲ್ ಇಸ್ಲಾಂ ಮದರಸ‌ ಸಭಾಂಗಣದಲ್ಲಿ ನಡೆಯಿತು. ಸಮಿತಿಯ ಗೌರವಧ್ಯಕ್ಷರಾದ ಇಬ್ರಾಹಿಂ ಫೈಝಿ ದುವಾ ನೆರವೇರಿಸಿ ಸಭೆಯನ್ನು ಉದ್ಘಾಟಿಸಿದರು.

ಜೊತೆ ಕಾರ್ಯದರ್ಶಿ ಸಲಾಮ್ ಪಿ ಎಚ್ ಕಿರಾಅತ್ ಪಠಿಸಿದರು.
ಸಭೆಯ ಉದ್ಘಾಟನೆಯನ್ನು ಬದ್ರಿಯ ಜುಮಾ ಮಸೀದಿ. ಖತೀಬಾರದ ಶಮೀರ್ ನಹೀಮಿ
ನೆರವೇರಿಸಿ ಮಾತನಾಡಿ ಸಮಿತಿಯ ಕಾರ್ಯವೈಖರಿಯನ್ನು ಪ್ರಸ್ತಾಪಿಸಿ ಮಾತನಾಡಿ ಪ್ರಶಂಸೆ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ. ಅಬೂಸಾಲಿ ಕೆ ಪಿ ವಹಿಸಿದ್ದರು.
ಕಳೆದ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡನೆಯನ್ನು ಪ್ರಧಾನ ಕಾರ್ಯದರ್ಶಿ ಹನೀಫ್ ಪಿ ವಾಚಿಸಿದರು.

ಸಭೆಯಲ್ಲಿ ಕಳೆದ ವರ್ಷದ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಖುವ್ವತ್ತುಲ್ ಇಸ್ಲಾಂ ಮದರಸ ಪೈಚಾರ್ ಇದರ ವಿದ್ಯಾರ್ಥಿಗಳು ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಬರಲು ಕಾರಣಕರ್ತರಾದ
ಮದರಸ ಸದರ್ ಮುಅಲ್ಲಿಮ್ ಮುಯ್ಯದ್ದೀನ್ ಲತೀಫಿರನ್ನು ಗೌರವಿಸಲಾಯಿತು.

ಸಭಾ ವೇದಿಕೆಯಲ್ಲಿ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಶರೀಫ್ ಟಿ ಎ, ಮುಅಲ್ಲಿಮರಾದಹನೀಫ್ ಮುಸ್ಲಿಯಾರ್, ಜಮಾಹತ್ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಸಭೆಯಲ್ಲಿ ಮುಂದಿನ ದಿನಗಳಲ್ಲಿ ಆಯೋಜಿಸಬೇಕಾದ ಹಲವಾರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
ನಂತರ 2023.2024 ನೇ ಆಡಳಿತ ಸಮಿತಿಯನ್ನು ರಚಿಸಿ
ನೂತನ ಸಾಲಿನ
ಅಧ್ಯಕ್ಷರಾಗಿ ಆಶ್ರಪ್(ಅಚ್ಚಪ್ಪು)ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಉಪಾಧ್ಯಕ್ಷರಾಗಿ ಅಬ್ದುಲ್ ಸತ್ತಾರ್ ಪಿ ಎ.ಪ್ರಧಾನ ಕಾರ್ಯದರ್ಶಿ ಮುಜೀಬ್ ಪೈಚಾರ್,ಜೊತೆ ಕಾರ್ಯದರ್ಶಿಯಾಗಿ
ಅಬ್ದುಲ್ ಸಲಾಮ್ ಪಿ ಎಚ್
ಜೊತೆ ಕಾರ್ಯದರ್ಶಿಯಾಗಿ
ಹರ್ಷದ್ ಪ್ರಗತಿ,
ಕೋಶಾಧಿಕಾರಿ
ಅಬ್ದುಲ್ ಕರೀಮ್ ಕೆ ಎಮ್.
ಸದಸ್ಯರುಗಳಾಗಿ
ಹನೀಫ್.ಪಿ ಕೆ,
ಅಬೂಸಾಲಿ ಕೆ ಪಿ,
ಆಶೀಕ್ ಶಾಂತಿನಗರ, ಉನೈಸ್,
ಮಹಮ್ಮದ್ ಅಲಿ ಪೈಚಾರ್,
ಅನೀಶ್ ಬೆಟ್ಟಂಪಾಡಿ,
ಇವರುಗಳು ಅಯ್ಕೆ ಮಾಡಲಾಯಿತು.
ಮುಜೀಬ್ ಪೈಚಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.