ಬೆಳ್ಳಾರೆ ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ನಮಿತಾ ಎಲ್. ರೈ, ಉಪಾಧ್ಯಕ್ಷರಾಗಿ ವೀಣಾ ಮೂಡಾಯಿತೋಟ ಅವಿರೋಧ ಆಯ್ಕೆ

0

ಬೆಳ್ಳಾರೆ ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ನಮಿತಾ ಎಲ್. ರೈ, ಉಪಾಧ್ಯಕ್ಷರಾಗಿ ವೀಣಾ ಮೂಡಾಯಿತೋಟ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಮಿತಾರವರ ನಾಮಪತ್ರಕ್ಕೆ ಹಾಲಿ ಅಧ್ಯಕ್ಷ ಚಂದ್ರಶೇಖರ ಪನ್ನೆ ಸೂಚಕರಾಗಿದ್ದರೆ, ಉಪಾಧ್ಯಕ್ಷ ಸ್ಥಾನದ ವೀಣಾ ಮೂಡಾಯಿತೋಟರವರ ನಾಮಪತ್ರಕ್ಕೆ ಹಾಲಿ ಉಪಾಧ್ಯಕ್ಷೆ ಗೌರಿ ನೆಟ್ಟಾರು ಸೂಚಕರಾಗಿದ್ದರು. ಈ ಇಬ್ಬರ ನಾಮಪತ್ರಗಳು ಮಾತ್ರ ಬಂದಿದ್ದರ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಡಾ. ರಾಮಚಂದ್ರರವರು ಅವಿರೋಧ ಆಯ್ಕೆಯ ಘೋಷನೆ ಮಾಡಿದರು.


ಅಭಿನಂದನೆ :


ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆಯ ಬಳಿಕ ಅಧ್ಯಕ್ಷ ಚಂದ್ರಶೇಖರ ಪನ್ನೆ, ವಿಪಕ್ಷ ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು,ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಿಜೆಪಿ ಮುಖಂಡರಾದ ರಾಮಕೃಷ್ಣ ಭಟ್ ಹಾಗೂ ಶ್ರೀನಾಥ್ ರೈ ಬಾಳಿಲ ಅಧ್ಯಕ್ಷ,ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು. ಆಯಕೆಯ ಬಳಿಕ ಮಾತನಾಡಿದ ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರು ಸರ್ವ ಸದಸ್ಯರ ಬೆಂಬಲ ಮತ್ತು ಸಲಹೆ ಪಡೆದು ಗ್ರಾಮದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಗ್ರಾ.ಪಂ. ಸದಸ್ಯರುಗಳಾದ ಎನ್.ಎಸ್.ಡಿ. ವಿಠಲದಾಸ್, ಭವ್ಯ ರವಿಕುಮಾರ್, ಜಯಶ್ರೀ ಪಡ್ಪು, ಶ್ವೇತಾ ನೆಟ್ಟಾರು, ನಸೀಮಾ ಪಳ್ಳಿಮಜಲು, ದಿನೇಶ್ಚಂದ್ರ ಹೆಗ್ಡೆ ಉಪಸ್ಥಿತರಿದ್ದರು.
ಗ್ರಾ.ಪಂ. ಪ್ರಭಾರ ಕಾರ್ಯದರ್ಶಿ ತಿರುಮಲೇಶ್ವರ ಹಾಗೂ ಲೆಕ್ಕ ಸಹಾಯಕರಾದ ಸುಶೀಲಾರವರು ಚುನಾವಣಾಧಿಕಾರಿಗೆ ಸಹಕಾರ ನೀಡಿದರು.