ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ರೋಟರಿ ಕ್ಲಬ್ ಸುಳ್ಯ ಇವರ ಎಫ್ ಸಿಸಿ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲೂಕಿನ ಉದ್ದಂತಡ್ಕ ಅಂಗನವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ ಮಾಹಿತಿ ಮತ್ತು ಗರ್ಭಿಣಿ, ಅಪೌಷ್ಟಿಕ ಮಕ್ಕಳಿಗೆ ರೋಟರಿ ಕ್ಲಬ್ ಸುಳ್ಯ ಇವರ ವತಿಯಿಂದ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮ ಆ.7ರಂದು ನಡೆಯಿತು.
ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಟಿ ಸ್ತನ್ಯಪಾನದ ಕುರಿತು ಮಾಹಿತಿ ನೀಡಿದರು. ಸುಳ್ಯ ರೋಟರಿ ಕ್ಲಬ್ ನ ಅಧ್ಯಕ್ಷ ರೋಟರಿಯನ್ ಆನಂದ ಕಂಡಿಗೆ ಪೌಷ್ಟಿಕ ಆಹಾರ ವಿತರಿಸಿ ಗರ್ಭಿಣಿ ತಾಯಂದಿರು ಮತ್ತು ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳ ಬೇಕಾಗಿ ಹೇಳಿದರು.
ರೋಟರಿ ಕ್ಲಬ್ ನ ಕಾರ್ಯದರ್ಶಿ ರೋ ಕಸ್ತೂರಿಶಂಕರ್, ಸದಸ್ಯ ರೊ. ಪ್ರಭಾಕರನ್ ನಾಯರ್ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಧನ್ಯ ಕುಮಾರಿ ಸ್ವಾಗತಿಸಿ ಆಶಾ ಕಾರ್ಯಕರ್ತೆ ಶ್ರೀಮತಿ ಜಯಶ್ರೀ ವಂದಿಸಿದರು. ತಾಯಂದಿರು, ಪೋಷಕರು ಭಾಗವಹಿಸಿದ್ದರು