ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪಾವನ ಜೋಗಿಬೆಟ್ಟು

0

ಉಪಾಧ್ಯಕ್ಷರಾಗಿ ರಮೇಶ್ ರೈ ಅವಿರೋಧ ಆಯ್ಕೆ

ಬಾಳಿಲ ಗ್ರಾಮ ಪಂಚಾಯತ್ ನ ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಶ್ರೀಮತಿ ಪಾವನ‌ ಜೋಗಿಬೆಟ್ಟು ಹಾಗೂ ಉಪಾಧ್ಯಕ್ಷರಾಗಿ ರಮೇಶ್ ರೈ ಅಗಲ್ಪಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆ.9 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು.

ಅಧ್ಯಕ್ಷತೆಗೆ ಪಾವನ ಜೋಗಿಬೆಟ್ಟುರವರನ್ನು ಪ್ರಸ್ತುತ ಅಧ್ಯಕ್ಷೆಯಾಗಿರುವ ಸವಿತಾ ಚಾಕೊಟೆಡ್ಕ ಸೂಚಿಸಿದರು. ಉಪಾಧ್ಯಕ್ಷತೆಗೆ ರಮೇಶ್ ರೈ ಅಗಲ್ಪಾಡಿಯವರನ್ನು ಉಪಾಧ್ಯಕ್ಷೆ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಪುರೋಹಿತ್ ಸೂಚಿಸಿದರು.

ಮಧ್ಯಾಹ್ನ 1 ಗಂಟೆಗೆ ಚುನಾವಣಾಧಿಕಾರಿಯಾಗಿದ್ದ ಜಿ.ಪಂ. ಇಂಜಿನಿಯರ್ ಮಣಿಕಂಠ ಚುನಾವಣಾ ಪ್ರಕ್ರಿಯೆ ನಡೆಸಿ, ಅಧ್ಯಕ್ಷ – ಉಪಾಧ್ಯಕ್ಷರು ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿದರು.
ಪಂಚಾಯತ್ ಸದಸ್ಯರಾದ ರವೀಂದ್ರ ರೈ ಟಪ್ಪಾಲುಕಟ್ಟೆ, ಸುಶೀಲ ಕಾಪಡ್ಕ, ಹರ್ಷ ಜೋಗಿಬೆಟ್ಟು, ತಾರಾನಾಥ ಮಡಿವಾಳ, ಮಾಜಿ ಜಿ.ಪಂ. ಸದಸ್ಯೆ ಶ್ರೀಮತಿ ಪುಷ್ಪಾವತಿ, ಮಾಜಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಪಕ್ಷದ ಪ್ರಮುಖರಾದ ಶ್ರೀನಾಥ್ ರೈ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ಸೂರ್ಯಕಾಂತ ರೈ ಅಕೇಖಿ, ಕಿರಣ್ ರೈ ಅಗಲ್ಪಾಡಿ, ರಾಕೇಶ್ ರೈ ಕೆಡಿಂಜಿ ರಮೇಶ್ ಕುರಿಯ ಮತ್ತಿತರರು ನಾಮಪತ್ರ ಸಲ್ಲಿಕೆ ಮತ್ತು ಆಯ್ಕೆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಾವನರ ತಂದೆ ಲಿಂಗಪ್ಪ ಗೌಡ ಕಾಯಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೂವಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದು, ನೂತನವಾಗಿ ಆಯ್ಕೆಯಾದವರಿಗೆ ಅಭಿನಂದನೆ ಸಲ್ಲಿಸಿ, ಪಂಚಾಯತ್ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಹೇಳಿದರು.