ಉಬರಡ್ಕ ಗ್ರಾಮ ಪಂಚಾಯತು ಅಧ್ಯಕ್ಷರಾಗಿ ಪೂರ್ಣಿಮಾ ಸೂಂತೋಡು

0

ಉಪಾಧ್ಯಕ್ಷರಾಗಿ ಚಿತ್ರಕುಮಾರಿ ಅವಿರೋಧ ಆಯ್ಕೆ

ಬಿಜೆಪಿ ಬಹುಮತವಿದ್ದರೂ ಮೀಸಲಾತಿ ಪ್ರಕಾರ ಉಪಾಧ್ಯಕ್ಷತೆ ಕಾಂಗ್ರೆಸ್ ಗೆ

ಉಬರಡ್ಕ ಗ್ರಾಮ ಪಂಚಾಯತು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಆ.09 ರಂದು ನಡೆದಿದ್ದು ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಶ್ರೀಮತಿ ಪೂರ್ಣಿಮಾ ಸೂಂತೋಡು ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶ್ರೀಮತಿ ಚಿತ್ರಕುಮಾರಿ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದು ಶ್ರೀಮತಿ ಪೂರ್ಣಿಮಾ ಸೂಂತೋಡು ನಾಮಪತ್ರ ಸಲ್ಲಿಸಿದ್ದರು.
ಸದಸ್ಯ ಪ್ರಶಾಂತ್ ಪಾನತ್ತಿಲ ಸೂಚಕರಾಗಿದ್ದರು.


ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮಹಿಳೆ ಒಬ್ಬರೆ ಇದ್ದುದರಿಂದ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆ ಮೀಸಲಾಗಿದ್ದು ಪ್ರಸ್ತುತ ಅಧ್ಯಕ್ಷರಾಗಿರುವ ಶ್ರೀಮತಿ ಚಿತ್ರಕುಮಾರಿ ನಾಮಪತ್ರ ಸಲ್ಲಿಸಿದ್ದರು.
ಇವರಿಗೆ ಶ್ರೀಮತಿ ಭವಾನಿ ಮೂರ್ಜೆ ಸೂಚಕರಾಗಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೂ ಪರಿಶಿಷ್ಠ ಪಂಗಡ ಮಹಿಳೆ ಒಬ್ಬರೇ ಇದ್ದುದರಿಂದ ನಾಮಪತ್ರ ಸಲ್ಲಿಸಿ ಇವರು ಅವಿರೋಧವಾಗಿ ಆಯ್ಕೆಯಾದರು.

ಕಳೆದ ಬಾರಿ ಅಧ್ಯಕ್ಷತೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಬಹುಮತ ಹೊಂದಿರುವ ಬಿಜೆಪಿ ಸದಸ್ಯರಲ್ಲಿ ಮೀಸಲಾತಿ ಪ್ರಕಾರ ಅರ್ಹರು ಇಲ್ಲದ ಕಾರಣ ಕಾಂಗ್ರೆಸ್ ಬೆಂಬಲಿತರಾದ ಚಿತ್ರಕುಮಾರಿ ಅಧ್ಯಕ್ಷರಾಗಿದ್ದರು. ಇದೇ ಚಿತ್ರಣ ಈ ಬಾರಿ ಉಪಾಧ್ಯಕ್ಷತೆ ಆಯ್ಕೆಯಲ್ಲಿ ಮರುಕಳಿಸಿತು.

ಚುನಾವಣಾಧಿಕಾರಿ ಪಂಜ ವಲಯಾರಣ್ಯಾಧಿಕಾರಿ ಗಿರೀಶ್ ಆರ್ .ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿದ್ಯಾಧರ್ ಸಹಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.