ಆಟಿ ಕಳೆಂಜ ಕುಣಿತದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
ನಿವೃತ್ತ ಉಪನ್ಯಾಸಕ ನಾರಾಯಣ ಮಣಿಯಾಣಿ ಕಕ್ಕಾಜೆ ಹಾಗೂ ಮುತ್ತು ಕೃಷಿಕ ನವೀನ್ ಚಾತುಬಾಯಿ ಅವರಿಗೆ ಗೌರವ ಸನ್ಮಾನ
ಸುಳ್ಯ ತಾಲೂಕು ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ಜಾಲ್ಸೂರು ಘಟಕದ ವತಿಯಿಂದ ಆಟಿಯ ಕೂಟ ಗೌರವ ಸನ್ಮಾನ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮವು ಜಾಲ್ಸೂರು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಆ.9ರಂದು ಜರುಗಿತು.
ಸುಳ್ಯದ ಜಟ್ಟಿಪಳ್ಳದಲ್ಲಿರು ಹಿರಿಯರ ಮನೆ ಇದರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಪ್ರಭಾಕರ ನಾಯರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವನ್ನು ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ಗೌರವಾಧ್ಯಕ್ಷರಾದ ಡಾ. ರಂಗಯ್ಯ ಅವರು ದೀಪಬೆಳಗಿಸಿ
ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸಾಹಿತಿ ಹಾಗೂ ಹಿರಿಯ ಪತ್ರಕರ್ತೆಯಾದ ಶ್ರೀಮತಿ ಚಂದ್ರಾವತಿ ಬಡ್ಡಡ್ಕ, ಕೋಶಾಧಿಕಾರಿ ರಾಮಚಂದ್ರ ಪೆಲತ್ತಡ್ಕ, ಜಾಲ್ಸೂರು ಗ್ರಾ.ಪಂ. ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಸಿ.ಎ. ಕೇಶವ ಅವರು ಆಟಿ ಕಳೆಂಜದ ಪಾಡ್ದನ ಹೇಳಿದರು. ಸಂಘದ ಕಾರ್ಯದರ್ಶಿ ಚೆನ್ನಕೇಶವ ಜಾಲ್ಸೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಕೆ.ಆರ್. ಗೋಪಾಲಕೃಷ್ಣ ಅವರು ಆಟಿ ತಿಂಗಳ ಕುರಿತು ತುಳು ಹಾಡನ್ನು ಹಾಡಿದರು.
ಸಾಹಿತಿ ಹಾಗೂ ಹಿರಿಯ ಪತ್ರಕರ್ತೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಅವರು ಆಟಿಯ ಕುರಿತು ಪ್ರಮುಖ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಇಬ್ಬರು ಸಾಧಕರನ್ನು ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಐವರ್ನಾಡು ಗ್ರಾಮದ ಪ್ರಗತಿಪರ ಕೃಷಿಕ ಮುತ್ತುಕೃಷಿಯಲ್ಲಿ ಸಾಧನೆ ಮಾಡಿರುವ ನವೀನ್ ಚಾತುಬಾಯಿ ಹಾಗೂ ನಿವೃತ್ತ ಉಪನ್ಯಾಸಕ ನಾರಾಯಣ ಮಣಿಯಾಣಿ ಕಕ್ಕಾಜೆ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ , ಗೌರವಿಸಲಾಯಿತು.
ಆಟಿ ಕೂಟ ಕಾರ್ಯಕ್ರಮದಲ್ಲಿ ಆಟಿ ಕಳೆಂಜ ಕುಣಿತ, ಚೆನ್ನಮಣೆ ಆಟದ ಪ್ರದರ್ಶನ, ತೆಂಗಿನ ಕಾಯಿ ಕುಟ್ಟುವ ಪ್ರದರ್ಶನ, ತೆಂಗಿನಕಾಯಿಗೆ ಕಲ್ಲು ಹೊಡೆಯುವುದು ಸೇರಿದಂತೆ ಪುರುಷ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ಜರುಗಿತು.
ಈ ಸಂದರ್ಭದಲ್ಲಿ ಸಂಧ್ಯಾ ಚೇತನ ಹಿರಿಯ ನಾಗರಿಕರ ಸಂಘದ ಸುಳ್ಯ ತಾಲೂಕು ಪದಾಧಿಕಾರಿಗಳು, ಜಾಲ್ಸೂರು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಸದಸ್ಯ ಎಂ.ಎಸ್. ಶ್ಯಾಮ್ ಕುಮಾರ್ ಬೆನಕ ಅವರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರಾದ ಜಾಕೆ ಸದಾನಂದ ಅವರು ವಂದಿಸಿದರು. ಮಧ್ಯಾಹ್ನ ಆಟಿವಿಶೇಷ ತಿನಿಸುಗಳ ಭೋಜನ ನಡೆಯಿತು.