ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಗೀತಾ ಹೊಸೊಳಿಕೆ ಅವಿರೋಧ ಆಯ್ಕೆ

0

ಉಪಾಧ್ಯಕ್ಷತೆಗೆ ಸಲ್ಲಿಸಿದ್ದ ಮೂರು ನಾಮಪತ್ರದಲ್ಲಿ ಒಬ್ಬರು ಹಿಂತೆಗೆತ – ಚುನಾವಣೆ

ಮರ್ಕಂಜ ಗ್ರಾಮ ಪಂಚಾಯತ್ ನ ಮುಂದಿನ ಎರಡೂವರೆ ವರ್ಷದ ಅವಧಿಗೆ ಗೀತಾ ಹೊಸೊಳಿಕೆಯವರು‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮರ್ಕಂಜ ಗ್ರಾಮ ಪಂಚಾಯತ್ ಗೆ ಈ ಬಾರಿ ಪ.ಪಂಗಡಕ್ಕೆ ಮೀಸಲಾತಿ ನಿಗದಿಯಾಗಿತ್ತು. ಅದರಂತೆ ಗೀತಾ‌ಹೊಸೊಳಿಕೆ ನಾಮಪತ್ರ ಸಲ್ಲಿಸಿದ್ದರು. ಇದೀಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.‌

ಉಪಾಧ್ಯಕ್ಷತೆ ಸ್ಥಾನಕ್ಕೆ ಮೂರು ನಾಮಪತ್ರ ಸಲ್ಲಿಕೆಯಾಗಿತ್ತು. ಅದರಲ್ಲಿ ನಾಗವೇಣಿ ಶೆಟ್ಟಿ ಮಜಲು ತಮ್ಮ ನಾಮಪತ್ರವನ್ನು ಹಿಂಪಡೆದರು. ಉಳಿದಂತೆ ಸಂಧ್ಯಾ ಸೇವಾಜೆ ಪಾರೆಮಜಲು ಮತ್ತು ರಮತ‌ ಕುದ್ಕುಳಿ ಯವರ ನಾಮಪತ್ರ ಸಿಂಧುವಾಗಿದ್ದು, ಇವರ ಮಧ್ಯೆ ಚುನಾವಣಾ ನಡೆಯಲಿದ್ದು, ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ.