ಬಿಜೆಪಿಯ 4 ಗ್ರಾ.ಪಂ ಸದಸ್ಯರು ಮತದಾನದಿಂದ ದೂರ
ಗುತ್ತಿಗಾರು ಗ್ರಾ.ಪಂ ಅಧ್ಯಕ್ಷ ಸ್ಥಾನ ಹಿಂದುಳಿದ ಎ ವರ್ಗದ ಮಹಿಳೆಗೆ ಮೀಸಲಿದ್ದು ಬಿಜೆಪಿಯ ಸುಮಿತ್ರಾ ಮೂಕಮಲೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಗೆ ಮೀಸಲಿದ್ದು ಬಿಜೆಪಿಯ ಭಾರತಿ ಸಾಲ್ತಾಡಿ ಅವರುಗಳ ಆಯ್ಕೆ ನಡೆದಿದೆ.
ಬಿಜೆಪಿಯ 4 ಗ್ರಾ.ಪಂ ಸದಸ್ಯರು ಮತದಾನದಿಂದ ಪ್ರಕ್ರಿಯೆಯಿಂದ ದೂರ ನಿಂತು ಹುಬ್ಬೆರಿಸುವಂತೆ ಮಾಡಿದ್ದಾರೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮತದಾನ ಪ್ರಕ್ರಿಯೆ ನಡೆದಾಗ ಅಧ್ಯಕ್ಷತೆಗೆ ಸ್ಪರ್ಧಿಸಿದ್ದ ಬಿಜೆಪಿಯ ಸುಮಿತ್ರಾ ಮೂಕಮಲೆ 9 ಮತ ಪಡೆದರೆ , ಗ್ರಾಮ ಭಾರತದ ತಂಡದ ಲತಾ ಆಜಡ್ಕ ಅವರು 4 ಮತ ಪಡೆದರು.
ಉಪಾಧ್ಯಕ್ಷತೆಗೆ ಸ್ಪರ್ಧಿಸಿದ್ದ ಬಿಜೆಪಿಯ ಭಾರತಿ ಸಾಲ್ತಾಡಿ 6 ಮತ ಹಾಗೂ ಗ್ರಾಮ ಭಾರತ ತಂಡದ ವಸಂತ ಮೊಗ್ರ 4 ಮತ ಪಡೆದರು. 3 ಮತ ಚಲಾವಣೆ ಆಗಿರಲಿಲ್ಲ.
ಸುಮಿತ್ರಾ ಅವರನ್ನು ಮಾಯಿಲಪ್ಪ ಕೊಂಬೆಟ್ಟು ಸೂಚಿಸಿದರು. ಭಾರತಿ ಅವರನ್ನು ವೆಂಕಟ್ ವಳಲಂಬೆ ಸೂಚಿಸಿದರು. ಲತಾ ಆಜಡ್ಕ ಅವರನ್ನು ಎಂ.ಕೆ ಶಾರದಾ ಸೂಚಿಸಿದರೆ, ವಸಂತ ಅವರನ್ನು ಲತಾ ಆಜಡ್ಕ ಸೂಚಿಸಿದರು.
ಒಟ್ಟು 17 ಸ್ಥಾನಗಳನ್ನು ಹೊಂದಿರುವ ಗುತ್ತಿಗಾರು ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ 13 ಸದಸ್ಯರಿದ್ದು, ಗ್ರಾಮ ಭಾರತ ತಂಡದ 4 ಸದಸ್ಯರಿದ್ದಾರೆ.
ಅಧ್ಯಕ್ಷ ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆ ಸಂದರ್ಭ ಬಿಜೆಪಿಯ ರೇವತಿ ಆಚಳ್ಳಿ, ಸುಮಿತ್ರಾ ಮೂಕಮಲೆ, ಮಂಜುಳಾ ಮುತ್ಲಾಜೆ, ಮಾಯಿಲಪ್ಪ ಕೊಂಬೆಟ್ಟು, ವೆಂಕಟ್ ವಳಲಂಬೆ, ಜಗದೀಶ ಬಾಕಿಲ, ಅನಿತಾ ಮೆಟ್ಟಿನಡ್ಕ, ಭಾರತಿ ಕೆ.ಎಸ್, ವಿನಯ್ ಸಾಲ್ತಾಡಿ ಉಪಸ್ಥಿತರಿದ್ದರು ಹಾಗೂ ಗ್ರಾಮ ಭಾರತ ತಂಡದ ಭರತ್ ಕೆ.ವಿ, ಲತಾಕುಮಾರಿ ಆಜಡ್ಕ, ಎಂ.ಕೆ ಶಾರದ, ವಸಂತ ಮೊಗ್ರ ಉಪಸ್ಥಿತರಿದ್ದರು.
ಚುನಾವಣಾ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಹಾಗೂ ಸಹಾಯಕರಾಗಿ ಚುನಾವಣಾ ಅಧಿಕಾರಿಯಾ ಪಿ.ಡಿ.ಒ ಧನಪತಿ ಇದ್ದರು. ಗ್ರಾ.ಪಂ ಸಿಬ್ಬಂದಿಗಳಾದ ಜಯಪ್ರಕಾಶ್, ಅನಿತಾ, ಚೋಮಯ್ಯ, ತೇಜೇಶ್ವರಿ, ಅಭಿಲಾಷ, ಕಾವೇರಿ ಸಹಕರಿಸಿದರು.
ಬಿಜೆಪಿಯ 4 ಗ್ರಾ.ಪಂ ಸದಸ್ಯರು ಮತದಾನದಿಂದ ದೂರ
ಮತದಾನ ಪ್ರಕ್ರಿಯೆ ನಡೆದಾಗ ಗ್ರಾ.ಪಂ ಸದಸ್ಯರುಗಳಾದ ವಿಜಯ ಕುಮಾರ್ ಚಾರ್ಮತ, ಹರೀಶ್ ಕೊಯಿಲ, ಲೀಲಾವತಿ ಅಂಜೇರಿ, ಪ್ರಮೀಳಾ ಎರ್ದಡ್ಕ ಮತದಾನ ಪ್ರಕ್ರಿಯೆಯಿಂದ ದೂರ ನಿಂತರು. ಹಾಲಿ ಉಪಾಧ್ಯಕ್ಷೆ ಪ್ರಮೀಳಾ ಎರ್ದಡ್ಕ ಅವರಿಗೆ ಅಧ್ಯಕ್ಷತೆ ನೀಡಲಿಲ್ಲ ಎಂಬ ಕಾರಣಕ್ಕಾಗಿ ಮತದಾನ ದಿಂದ ದೂರ ನಿಂತರೆನ್ನಲಾಗಿದೆ.