ಸುಳ್ಯದ ಗಾಂಧಿನಗರ ಕೆಪಿಎಸ್ ಶಾಲೆಯಲ್ಲಿ ಹೆಣ್ಣು ಮಕ್ಕಳ ಆತ್ಮ ಸುರಕ್ಷೆ ಕುರಿತು ಮಾಹಿತಿ ಕಾರ್ಯಾಗಾರ ಸುಳ್ಯ ಇನ್ನರ್ವೀಲ್ಕ್ಲಬ್ ಸಹಯೋಗದಲ್ಲಿ ಆ.10 ರಂದು ನಡೆಯಿತು.
ಸುಳ್ಯ ಪೋಲೀಸ್ ಠಾಣೆಯ ಕ್ರೈಮ್ ಎಸ್. ಐ ಸರಸ್ವತಿ ಯವರು ಮಾಹಿತಿ ನೀಡಿದರು. ವೇದಿಕೆ ಯಲ್ಲಿ ಮುಖ್ಯ ಶಿಕ್ಷಕಿ, ಜ್ಯೋತಿಲಕ್ಷ್ಮಿ, ಕಾನ್ ಸ್ಟೇಬಲ್ ದಿನೇಶ್, ಮತ್ತು ಇನ್ನರ್ವಿಲ್ ಕ್ಲಬ್ ಅಧ್ಯಕ್ಷೆ ಸವಿತಾನಾರ್ಕೋಡು ಹಾಗೂ ಸದಸ್ಯರು, ಶಿಕ್ಷಕರು ಹಾಜರಿದ್ದರು.