ಮಾಣಿಮರ್ದು- ಕೋಡಂಬಾರೆ ಸೇತುವೆಗೆ ಮಂಜೂರಾದ ಅನುದಾನ ವರ್ಗಾವಣೆಅನಿವಾರ್ಯವಾಗಿತ್ತು -ದಿನೇಶ್ ಕಣಕ್ಕೂರು ಸ್ಪಷ್ಟನೆ

0

ಅರಣ್ಯ ಇಲಾಖೆಯ ಪ್ರದೇಶದಲ್ಲಿ ಹಾದು ಹೋಗುವ ಆಲೆಟ್ಟಿ ಗ್ರಾಮದ ವ್ಯಾಪ್ತಿಯಲ್ಲಿರುವ ಮಾಣಿಮರ್ದು- ಕೋಡಂಬಾರೆ ಪರಿಶಿಷ್ಟ ಪಂಗಡದ ನಿವಾಸಿಗಳ ಮನೆಗೆ ಹೋಗುವ ರಸ್ತೆಯಲ್ಲಿ ಕಿರಿದಾದ ತೋಡಿಗೆ ಸೇತುವೆ ನಿರ್ಮಾಣಕ್ಕೆ ಬಂದಿರುವ ಅನುದಾನವನ್ನು ಕಾರಣಾಂತರದಿಂದ ಅದೇ ವಾರ್ಡಿನ ಮತ್ತೊಂದು ಕಡೆಗೆ ವರ್ಗಾಯಿಸುವ ಅನಿವಾರ್ಯತೆ ಎದುರಾಯಿತು. ಮಾಣಿಮರ್ದು ಕೊಡಂಬಾರೆ ಭಾಗದ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆಯವರು ಈಗಾಗಲೇ ಜಂಟಿ ಸರ್ವೆ ಕಾರ್ಯ ನಡೆಸಲಾಗಿದ್ದು ಅರಣ್ಯ ಇಲಾಖೆಯ ಎಫ್.ಸಿ.ದೊರಕಿದ ನಂತರವೇ ಮೆಸ್ಕಾಂ ನವರು ವಿದ್ಯುತ್ ಸಂಪರ್ಕದ ಕೆಲಸ ಮಾಡಬೇಕಾಗಿರುವುದು. ಒಂದು ವೇಳೆ ಸೇತುವೆ ಕಾಮಗಾರಿ ನಡೆಸುವುದರಿಂದ ವಿದ್ಯುತ್ ಸಂಪರ್ಕದ ವ್ಯವಸ್ಥೆಗೆ ತೊಡಕಾಗುವ ಸಾಧ್ಯತೆ ಇರುವುದನ್ನು ಮನಗಂಡು ಸದ್ಯದ ಪರಿಸ್ಥಿತಿಗೆ ಅನುದಾನ ಅದೇ ವಾರ್ಡಿನ ಅಭಿವೃದ್ಧಿ ಗೆ ಬಳಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿ ಯವರು ನೀಡಿದ ಸೂಚನೆಯಂತೆ ಟೆಕ್ನಿಕಲ್ ಸಮಸ್ಯೆಯಿಂದ ಮಂಜೂರುಗೊಂಡ ಅನುದಾನ ಲ್ಯಾಪ್ಸ್ ಆಗಿ ಹಿಂದಕ್ಕೆ ಹೋಗಬಾರದೆಂಬ ಕಾರಣಕ್ಕೆ ಬೇರೆ ಕಡೆ ಬಳಸಿ ಸೇತುವೆ ನಿರ್ಮಿಸಲಾಗಿದೆ. ಮಾಣಿಮರ್ದು ಕೊಡಂಬಾರೆ ಯಲ್ಲಿ ಸೇತುವೆ ನಿರ್ಮಿಸಲು
ಈಗಾಗಲೇ ಲೋಕೋಪಯೋಗಿ ಇಲಾಖೆಯವರೊಂದಿಗೆ ಮಾತುಕತೆ ನಡೆಸಲಾಗಿದ್ದು ಅನುದಾನ ತರಿಸಿಕೊಂಡು ಅರಣ್ಯ ಇಲಾಖೆಯಿಂದ ಅನುಮತಿ ದೊರಕಿದ ಬಳಿಕ ಸೇತುವೆ ನಿರ್ಮಿಸುವ ಭರವಸೆ ನೀಡುತ್ತೇವೆ ಎಂದು ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು ಸುದ್ದಿಗೆ ಪ್ರತಿಕ್ರಿಯೆ ನೀಡಿರುತ್ತಾರೆ.