ಬೆಳ್ಳಾರೆ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯು ಆ.10 ರಂದು ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ , ಉಪಾಧ್ಯಕ್ಷರಾದ ಶ್ರೀಮತಿ ಗೌರಿ, ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು, ದಿನೇಶ್ಚಂದ್ರ ಬಿ. ಹೆಗ್ಡೆ, ಎನ್ .ಎಸ್ ಡಿ .ವಿಠಲ್ ದಾಸ್, ಮಣಿಕಂಠ, ಶ್ರೀಮತಿ ನಮಿತ ಕೆ ಎಲ್ ರೈ, ಶ್ರೀಮತಿ ಜಯಶ್ರೀ, ಶ್ರೀಮತಿ ಮೋಹಿನಿ, ಶ್ರೀಮತಿ ಭವ್ಯ, ಶ್ರೀಮತಿ ವೀಣಾ .ಪಂಚಾಯತ್ ಅಭಿವೃದ್ಧಿ ಅಧಿಕಾರಿ,ಕಾರ್ಯದರ್ಶಿ,ಲೆಕ್ಕಸಹಾಯಕರು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.
ಕಾರ್ಯಕ್ರಮದ ಮೊದಲಿಗೆ ಆಡಳಿತದಲ್ಲಿ ಮಕ್ಕಳು, ಸರ್ಕಾರದೊಡಣೆ ಮಕ್ಕಳ ಪಾತ್ರ ವಿಷಯದ ಕುರಿತು ಮಾಹಿತಿಯನ್ನು ಕು. ದಿವ್ಯಾ ಇವರು ಭಾಗವಹಿಸಿ ಮಾಹಿತಿ ನೀಡಿದರು.