ಆಲೆಟ್ಟಿ ಪಂಚಾಯತ್ ಪಿ.ಡಿ.ಒ ಕೀರ್ತಿ ಪ್ರಸಾದ್ ಕಲ್ಮಡ್ಕಕ್ಕೆ ವರ್ಗಾವಣೆ

0

ಆಲೆಟ್ಟಿ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಕೀರ್ತಿ ಪ್ರಸಾದ್ ರವರು ಕಲ್ಮಡ್ಕ ಗ್ರಾಮ ಪಂಚಾಯತ್ ಗೆ ವರ್ಗಾವಣೆಗೊಂಡಿರುವುದಾಗಿ ತಿಳಿದು ಬಂದಿದೆ. ಇವರು ಆಲೆಟ್ಟಿ ಮತ್ತು ಪಂಜ ಗ್ರಾಮ ಪಂಚಾಯತ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗಾಗಲೇ ವರ್ಗಾವಣೆಯ ಆದೇಶ ಪತ್ರ ಬಂದಿದ್ದು ರಿಲೀವ್ ಆಗಿರುವುದಿಲ್ಲ.


ಪ್ರಸ್ತುತ ಆಲೆಟ್ಟಿ ಪಂಚಾಯತ್ ನಲ್ಲಿ ಗ್ರೇಡ್ 1 ಕಾರ್ಯದರ್ಶಿ ಸೃಜನ್ ಎ.ಜಿ ಯವರು ಪ್ರಭಾರ ಪಿ.ಡಿ.ಒ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.