ಆಲೆಟ್ಟಿ ಗ್ರಾಮದ ಬಾರ್ಪಣೆ ವಿಕ್ರಮ ಯುವಕ ಮಂಡಲದ ವತಿಯಿಂದ ಆಲೆಟ್ಟಿ ನಾರ್ಕೋಡು ಸ.ಹಿ.ಪ್ರಾ. ಶಾಲೆಯ ಎಲ್.ಕೆ.ಜಿ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ವಿನಯ್ ಕುಮಾರ್ , ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಕೋಲ್ಚಾರು, ಎಲ್.ಕೆ.ಜಿ ಮತ್ತು ಯು.ಕೆ.ಜಿ ನಿರ್ವಹಣಾ ಸಮಿತಿ ಅಧ್ಯಕ್ಷ ಚಂದ್ರಕಾಂತ ನಾರ್ಕೋಡು, ಪ್ರವೀಣ್ ಕಲ್ಲೆಂಬಿ, ಆಶ್ವಿನ್ ಬಾರ್ಪಣೆ, ರಾಮಚಂದ್ರ ಬಾಳೆಹಿತ್ಲು ಹಾಗೂ ಯುವಕ ಮಂಡಲದ ಸದಸ್ಯರು, ಮಕ್ಕಳ ಪೋಷಕರು ಹಾಗೂ ಶಾಲಾ ಮುಖ್ಯ ಶಿಕ್ಷಕರು ಮತ್ತು ಅದ್ಯಾಪಕ ವೃಂದದವರು ಉಪಸ್ಥಿತರಿದ್ದರು.