ಚೊಕ್ಕಾಡಿ: ಗರುಡ ಯುವಕ ಮಂಡಲ ಮಯೂರಿ ಯುವತಿ ಮಂಡಲದ ಆಶ್ರಯದಲ್ಲಿ ಕೆಸರುಡೊಂಜಿ ದಿನ

0

ತುಳುವ ನಾಡಿನ ಸಂಪ್ರದಾಯ ಸಂಸ್ಕೃತಿಯನ್ನು ಉಳಿಸುವ ಯುವಕ ಯುವತಿ ಮಂಡಲದ ಕಾರ್ಯಶ್ಲಾಘನೀಯ-
ಪುತ್ತಿಲ

ಅಮರ ಪಡ್ನೂರು ಗ್ರಾಮದ ಚೊಕ್ಕಾಡಿ ಗರುಡ ಯುವಕ ಮಂಡಲ ಮತ್ತು ಮಯೂರಿ ಯುವತಿ ಮಂಡಲ ಇದರ ಜಂಟಿ ಆಶ್ರಯದಲ್ಲಿ ಕೆಸರುಡೊಂಜಿ ದಿನ ಕೆಸರುಗದ್ದೆ ಕ್ರೀಡಾಕೂಟಪ ವು ಆ. 13 ರಂದು ಚೆನ್ನಪರಿ ಅಚ್ಚಿಪಳ್ಳ ಗದ್ದೆಯಲ್ಲಿ ನಡೆಯಿತು.

ಬೆಳಗ್ಗೆ ಪಂದ್ಯಾಟದ ಉದ್ಘಾಟನೆಯನ್ನು ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದ ನಾಯರ್ ಪೂಜಾರಿ ಕುಸುಮಾಧರ ಕೊಳಂಬೆ ಯವರು ನೆರವೇರಿಸಿದರು. ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಸ್ವಾತಿ ಪದವು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿ.ಪಂ. ಮಾಜಿ ಸದಸ್ಯ ಎಸ್.ಎನ್. ಮನ್ಮಥ, ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಪಿಲಿ, ಶಿಕ್ಷಕಿ
ಶ್ರೀಮತಿ ರೂಪವಾಣಿ, ಅಮರಮುಡ್ನೂರು ಪಂ.ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ,ಮಯೂರಿ ಯುವತಿ ಮಂಡಲದ ಸ್ಥಾಪಕಾಧ್ಯಕ್ಷ ಶ್ರೀಮತಿ ಉಷಾಲತಾ ಪಡ್ಪು ಭಾಗವಹಿಸಿದ್ದರು.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಆಗಮನ: ಸನ್ಮಾನ

ಪಂದ್ಯಾಟ ಆರಂಭಗೊಂಡ ನಂತರ ಆಗಮಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರು ಮಾತನಾಡಿ ” ತುಳುನಾಡಿನ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ಅವಿಭಕ್ತ ಕುಟುಂಬದ ಸದಸ್ಯರು ಹಿಂದಿನ ಕಾಲದಲ್ಲಿ ಮಾಡುತ್ತಿದ್ದ ಬೇಸಾಯದ ಪದ್ದತಿಯನ್ನು ಮರುಕಳಿಸುವಂತೆ ಮಾಡುವುದರೊಂದಿಗೆ ಕೆಸರು ಗದ್ದೆಯಲ್ಲಿ ಇಂತಹ ಆಟೋಟ ಸ್ಪರ್ಧೆ ಗಳನ್ನು ಆಯೋಜಿಸಿ ಮುಂದಿನ ಪೀಳಿಗೆಗೆ ಹಿಂದೂ ಧರ್ಮದ ಆಚಾರ ಪದ್ದತಿಯನ್ನು ತಿಳಿಸುವ ಉದ್ದೇಶ ಅಭಿನಂದನೀಯ. ಯುವಕ ಯುವತಿ ಮಂಡಲದ ಸದಸ್ಯರು ಪ್ರಶಸ್ತಿ ಬಹುಮಾನಗಳ ಹಿಂದೆ ಬೀಳುವ ಬದಲು ಇಂತಹ ಅದ್ಭುತ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ಉತ್ತಮ ಬೆಳವಣಿಗೆಯಾಗಲು ಸಾಧ್ಯ ವಿದೆ ಎಂದು ಕರೆ ನೀಡಿದರು.

ವಾಹನ ಜಾಥಾದೊಂದಿಗೆ ಅದ್ದೂರಿ ಘೋಷ ವಾಕ್ಯ ಹಾಗೂ ಸಿಡಿ ಮದ್ದಿನ ಅಬ್ಬರದೊಂದಿಗೆ ವೇದಿಕೆಗೆ ಪುತ್ತಿಲರನ್ನು ಕಾರ್ಯಕರ್ತರು ಕರೆದುಕೊಂಡು ಬರಲಾಯಿತು.
ಗರುಡ ಯುವಕ ಮಂಡಲದ ಅಧ್ಯಕ್ಷ ಮನೋಜ್ ಪಡ್ಪು ಸ್ವಾಗತಿಸಿದರು. ವೇದಿಕೆಯಲ್ಲಿ ಚೊಕ್ಕಾಡಿ ಸೊಸೈಟಿ ಅಧ್ಯಕ್ಷ ಕೇಶವ ಕರ್ಮಾಜೆ, ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶ್ರೀಧರ ಕರ್ಮಾಜೆ, ನಿವೃತ್ತ ಬಿ.ಎಸ್.ಎನ್.ಎಲ್.ಅಧಿಕಾರಿ ಎ.ಕೆ.ನಾಯ್ಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ರವರನ್ನು ಸಂಘಟಕರು ಶಾಲು ಹೊದಿಸಿ ಹಾರಾರ್ಪಣೆ ಮಾಡಿ ಪೇಟ ತೊಡಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಕೆಸರುಗದ್ದೆಯಲ್ಲಿ ಸಾರ್ವಜನಿಕ ಪುರುಷರಿಗೆ ಹ್ಯಾಂಡ್ ಬಾಲ್, ಬೆರಿ ಚೆಂಡು, ಗುಂಪು ಓಟ, ಸಾರ್ವಜನಿಕ ಮಹಿಳೆಯರಿಗೆ ಹ್ಯಾಂಡ್ ಬಾಲ್ ,ಬೆರಿ ಚೆಂಡು, ಗುಂಪು ಓಟ, ಮಕ್ಕಳಿಗೆ ಹಗ್ಗ ಜಗ್ಗಾಟ ,ಬೆರಿ ಚೆಂಡು, ಓಟ ,ಬುಗರಿ ಓಟ, ಹಗ್ಗ ಜಗ್ಗಾಟ, ಕೆಸರುಗದ್ದೆ ಓಟ, ಬುಗರಿ ಓಟ ಹಾಗೂ ವೈಯಕ್ತಿಕ ಸ್ಪರ್ಧೆಗಳು ನಡೆಯಿತು. 45 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ ಕೆಸರುಗದ್ದೆ ಓಟವನ್ನು ಆಯೋಜಿಸಲಾಯಿತು. ಅಮರ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಹಿರಿಯ ಕಿರಿಯರು ಸಂಭ್ರಮದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಪುರುಷರಿಗೆ ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆಯು ನಡೆಯಿತು.
ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಯಿತು.

ಗರುಡ ಯುವಕ ಮಂಡಲ ಮತ್ತು ಮಯೂರಿ ಯುವತಿ ಮಂಡಲದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ಅಚ್ಚು ಕಟ್ಟಾದ ವ್ಯವಸ್ಥೆಗೆ
ಸಹಕರಿಸಿದರು.