ಮೀನು ಮಾರುಕಟ್ಟೆ ಏಲಂ ವಿಚಾರವಾಗಿ ಸುದೀರ್ಘ ಚರ್ಚೆ
ಜಾಲ್ಸೂರು ಗ್ರಾಮ ಪಂಚಾಯತಿಯ 2022-23ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಆ.14ರಂದು ಜರುಗಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಅರಬಣ್ಣ ಪೂಜಾರ್ ಅವರು ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೆ.ಪಿ. ಸುಬ್ಬಯ್ಯ ಅವರು ಸ್ವಾಗತಿಸಿದರು. ಪಂಚಾಯತಿ ಬಿಲ್ ಕಲೆಕ್ಟರ್ ಚಿದಾನಂದ ಅವರು ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ ಮೀನು ಮಾರುಕಟ್ಟೆ ಏಲಂ ವಿಚಾರವಾಗಿ ಸುದೀರ್ಘ ಅವಧಿ ಪರ – ವಿರೋಧ ಚರ್ಚೆ ನಡೆಯಿತು.
ಸೋಣಂಗೇರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ವೃತ್ತಕ್ಕೆ ಅರ್ಜಿಗಳು ಬಂದಿದ್ದು, ಅದನ್ನು ಲೋಕೋಪಯೋಗಿ ಇಲಾಖೆಗೆ ಕಳುಹಿಸಿಕೊಡಲಾಗಿದ್ದು, ಲೋಕೋಪಯೋಗಿ ಇಲಾಖೆಯ ವತಿಯಿಂದ ಸಭೆ ನಡೆದು ಹೆಸರು ಅಂತಿಮಗೊಳ್ಳಲಿದೆ ಎಂದು ಗ್ರಾ.ಪಂ. ಅಧ್ಯಕ್ಷ ಕೆ.ಎಂ. ಬಾಬು ಹೇಳಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಂ. ಬಾಬು ಅವರ ಅಧ್ಯಕ್ಷತೆ ಹಾಗೂ ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ವಿನೋಬನಗರ ಅವರ ಉಪಾಧ್ಯಕ್ಷತೆಯ ಕೊನೆಯ ಗ್ರಾಮಸಭೆ ಇದಾಗಿದ್ದು, ಕೆ.ಎಂ. ಬಾಬು ಕದಿಕಡ್ಕ ಅವರ ನೇತೃತ್ವದ ಗ್ರಾಮ ಪಂಚಾಯತಿ ಆಡಳಿತ ಮಂಡಳಿಗೆ ಗ್ರಾಮಸ್ಥರ ಪರವಾಗಿ ಸತ್ಯಶಾಂತಿ ತ್ಯಾಗಮೂರ್ತಿ ಅವರು ಅಭಿನಂದನೆ ಸಲ್ಲಿಸಿದರು.
ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಕಾರ್ಯದರ್ಶಿ ಸುಂದರ , ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ, ಮುಂದಿನ ಎರಡೂವರೆ ವರ್ಷಗಳ ಅವಧಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ತಿರುಮಲೇಶ್ವರಿ ಮರಸಂಕ, ನೂತನ ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಸದಸ್ಯರುಗಳಾದ ಎನ್.ಎಂ. ಸತೀಶ್ ಕೆಮನಬಳ್ಳಿ, ಪಿ.ಆರ್. ಸಂದೀಪ್ ಕದಿಕಡ್ಕ, ಅಬ್ದುಲ್ ಮಜೀದ್ ನಡುವಡ್ಕ, ಮುಜೀಬ್ ಪೈಚಾರು, ಶ್ರೀಮತಿ ಗೀತಾ ಗೋಪಿನಾಥ್ ಬೊಳುಬೈಲು, ಶ್ರೀಮತಿ ಅಂಬಿಕ ಕುಕ್ಕಂದೂರು, ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು, ಶಿವಪ್ರಸಾದ್ ನೀರಬಸಿರು, ವಿಜಯ ಅಡ್ಕಾರು, ಈಶ್ವರ ನಾಯ್ಕ ಸೋಣಂಗೇರಿ, ಶ್ರೀಮತಿ ಗೀತಾ ಚಂದ್ರಹಾಸ ಅರ್ಭಡ್ಕ ಉಪಸ್ಥಿತರಿದ್ದರು. ಬಿಲ್ ಕಲೆಕ್ಟರ್ ಚಿದಾನಂದ ಅವರು ವಂದಿಸಿದರು. ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸಹಕರಿಸಿದರು.