ನಾಲ್ಕೂರು ಗ್ರಾಮದ ಹಾಲೆಮಜಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿ 76ನೇ ವರುಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಅಂಗನವಾಡಿ ಪುಟಾಣಿಗಳು, ಮಕ್ಕಳ ಪೋಷಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಲೆಮಜಲು ಬಸ್ಸು ತಂಗುಗದಾಣದ ಬಳಿಯಿಂದ ಮೆರವಣಿಗೆ ಮುಖಾಂತರ ಸಾಗಿ ಶಾಲೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಲಾಯಿತು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಶ್ರೀಮತಿ ಪವಿತ್ರ ಕುಕ್ಕುಜೆ ಧ್ವಜಾರೋಹಣವನ್ನು ನೆರವೇರಿಸಿ ಧ್ವಜ ವಂದನೆ ಸಲ್ಲಿಸಿದರು. ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಂತಿ ವಾಗ್ಲೆ, ನಿವೃತ ಶಿಕ್ಷಕ ದುಗ್ಗಪ್ಪ ಗೌಡ ಕುಳ್ಳಂಪಾಡಿ ಹಾಗೂ ಹರಿಶ್ಚಂದ್ರ ಕುಳ್ಳಂಪಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನ ಗೈದವರ ಬಗ್ಗೆ ಗುಣಗಾನ ಮಾಡಿದರು. ನಂತರ ಹಾಲೆಮಜಲು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಾದ ವಾಸುದೇವ ಗೌಡ ಪಡ್ಪು ಇವರ ಅಗಲುಕೆಯ ನೆನಪಿಗಾಗಿ ಒಂದು ನಿಮಿಷ ಮೌನ ಪ್ರಾರ್ಥನೆ, ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಆದರ್ಶ ಯೂತ್ ಕ್ಲಬ್ ಹಾಲೆಮಜಲು ಶೌರ್ಯ ವಿಪತುನಿರ್ವಹಣಾ ಘಟಕ ನಾಲ್ಕು ರು ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಯವರು ಪೋಷಕರು ಊರಿನವರು ಭಾಗವಹಿಸಿದ್ದರು. ಬಳಿಕ ಆದರ್ಶ ಯುತ್ ಕ್ಲಬ್ ನ ಸದಸ್ಯರು ಹಾಲೆಮಜಲು ಬಸ್ಸು ತಂಗುದಾಣ ಬಳಿಯಿಂದ ರಸ್ತೆ ಯ ಇಕ್ಕೆಲಗಳಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡೆದು ಸ್ವಚ್ಛಗೊಳಿಸಿದರು.
(ವರದಿ : ಡಿ.ಹೆಚ್)