ಸಂಪಾಜೆ ದೊಡ್ಡಡ್ಕದಲ್ಲಿ ಎಸ್.ಡಿ.ಪಿ.ಐ.ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

0

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ಬ್ಲಾಕ್ ಮತ್ತು ಸಂಪಾಜೆ ಬೂತ್ ವತಿಯಿಂದ 77ನೇ ವರ್ಷದ ಸ್ವಾತಂತ್ರೋತ್ಸವ ಕಾರ್ಯಕ್ರಮ ಸಂಪಾಜೆಯ ದೊಡ್ಡಡ್ಕದಲ್ಲಿ ನಡೆಯಿತು.
ಎಸ್ಡಿಪಿಐ ಸಂಪಾಜೆಯ ಬೂತ್ ಅಧ್ಯಕ್ಷರಾದ ಮರ್ಝೂಕ್ ಕಡೆಪಾಲ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಉಪಾಧ್ಯಕ್ಷರಾದ ಸಲೀಂ ಗೂನಡ್ಕ ರವರು ಧ್ವಜಾರೋಹಣ ನೆರವೇರಿಸಿದರು,
ಅಡ್ವೋಕೇಟ್ ರಷೀದ್ ಗೂನಡ್ಕ ಸ್ವಾತಂತ್ರ್ಯ ಸಂಧೇಶ ಭಾಷಣಗೈದರು.
ಮುಖ್ಯ ಅತಿಥಿಗಳಾಗಿ ಅನಿವಾಸಿ ಭಾರತೀಯ ಯೂನುಸ್ ಪಿ. ಯು. ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿಯ ಸಧಸ್ಯರಾದ ಅಶ್ರಫ್ ಟರ್ಲಿ, ಸುಳ್ಯ ಬ್ಲಾಕ್ ಅಧ್ಯಕ್ಷರಾದ ಮೀರಾಝ್ ಸುಳ್ಯ, ಸಂಪಾಜೆ ಬೂತ್ ಉಪಾಧ್ಯಕ್ಷರಾದ ನಶ್ಫಾನ್, ಜೊತೆ ಕಾರ್ಯದರ್ಶಿ ರಶೀದ್ ಅರಂಬೂರು ಬೂತ್ ಅಧ್ಯಕ್ಷರಾದ
ಇಬ್ರಾಹಿಂ ದೊಡ್ಡಡ್ಕ. ಮತ್ತು ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಉಪಸ್ತಿತರಿದ್ದರು.