ಪೆರುವಾಜೆ ಗ್ರಾಮ ಪಂಚಾಯತ್ ಮತ್ತು ಸ.ಹಿ.ಪ್ರಾ.ಶಾಲೆ ಪೆರುವಾಜೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಾತಂತ್ರ್ಯೋತ್ಸವ

0

ಸಾಧಕರಿಗೆ ಸನ್ಮಾನ‌ – ಗ್ರಂಥಾಲಯ ಉದ್ಘಾಟನೆ,ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ

ಪೆರುವಾಜೆ ಗ್ರಾಮ ಪಂಚಾಯತು ಮತ್ತು ಸ.ಹಿ.ಪ್ರಾ.ಶಾಲೆ ಪೆರುವಾಜೆ ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ತಮವು ಆ.15 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಬೆಳಿಗ್ಗೆ ಪಂಚಾಯತ್ ನಲ್ಲಿ ಧ್ವಜಾರೋಹಣ ನಡೆಯಿತು.


ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಧ್ವಜಾರೋಹಣ ನೆರವೇರಿಸಿದರು.


ಬಳಿಕ ಗ್ರಾಮಸ್ಥರಿಗೆ ಸ್ಪರ್ಧಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಗ್ರಾಮದ ಹಿರಿಯ ನಾಗರಿಕರಾದ ಶ್ರೀಮತಿ ಸುಶೀಲ ಪೊಡಿಯ, ಶ್ರೀಮತಿ ಸುಶೀಲ ಬಾಲಕೃಷ್ಣ, ಉಮ್ಮಕುಲ್ಸುರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.


ಬಳಿಕ ಗ್ರಾಮ ಪಂಚಾಯತ್ ಗ್ರಂಥಾಲಯವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಉದ್ಘಾಟಿಸಿದರು.
ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾರ್ವಜನಿಕರಿಗೆ ವಿವಿಧ ಸ್ಲರ್ದೆಗಳು ನಡೆಯಿತು.

ಸಾಧಕರಿಗೆ ಸನ್ಮಾನ

ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ,ಪ್ರತೀ ವರ್ಷ ಇಲ್ಲಿ ಸ್ವಾತಂತ್ರ್ಯೋತ್ಸವ ವನ್ನು ಎಲ್ಲರ ಸಹಕಾರದೊಂದಿಗೆ ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ.ಇದಕ್ಕೆ ಎಲ್ಲರ ಸಹಕಾರ ಕಾರಣ.ಮುಂದೆಯೂ ಇದೇ ರೀತಿ ಸಹಕಾರ ನೀಡಬೇಕೆಂದು ಹೇಳಿದರು.
ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀಮತಿ ಅಶ್ವಿನಿ ಕೋಡಿಬೈಲು,ಪವರ್ ಮೆನ್ ಮಾಂತೇಶ್, ಶ್ರಮಜೀವಿ ಬೆಳ್ತ ದುರ್ಗಾನಗರವರನ್ನು ಶಾಲು,ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಪೆರುವಾಜೆ ಡಾ.ಶಿವರಾಮ ಕಾರಂತ. ಸ.ಪ್ರ.ದ.ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಕಾಂತರಾಜು ಪ್ರಧಾನ ಭಾಷಣ ಮಾಡಿದರು.
ವೇದಿಕೆಯಲ್ಲಿ ಪೆರುವಾಜೆ ಶಾಲಾ ಮುಖ್ಯೋಪಾಧ್ಯಾಯ ತೇಜಪ್ಪ ಗೌಡ, ಎಸ್.ಡಿ.ಎಂ.ಸಿ.ಅಧ್ಯಕ್ಷ ವಿಜಯ ಕುಮಾರ್ , ಪಿಡಿಒ ಜಯಪ್ರಕಾಶ್ ಅಲೆಕ್ಕಾಡಿ, ಸುಬ್ರಾಯ ಭಟ್ ನೀರ್ಕಜೆ,ಸದಸ್ಯರಾದ ಪದ್ಮನಾಭ ಶೆಟ್ಟಿ ಪೆರುವಾಜೆ,ಉಪಾಧ್ಯಕ್ಷೆ ಚಂದ್ರಾವತಿ ಇಟ್ರಾಡಿ,ನಿಯೋಜಿತ ಉಪಾಧ್ಯಕೆ ಶಹಿನಾಜ್ ಪಿ, ಶ್ರೀಮತಿ ರೇವತಿ,ಶ್ರೀಮತಿ ಗುಲಾಬಿ ಉಪಸ್ಥಿತರಿದ್ದರು.
ಸದಸ್ಯ ಸಚಿನ್ ರಾಜ್ ಶೆಟ್ಟಿ ಸ್ವಾಗತಿಸಿ, ಸಿಬ್ಬಂದಿ ಜಯಶ್ರೀ ಪ್ರಾರ್ಥಿಸಿ,ವಾಸುದೇವ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು.ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ಸಭೆಯಲ್ಲಿ ನೆರೆದಿದ್ದವರರ ಮನಸೂರೆಗೊಳಿಸಿತು.
ಸ್ವಾತಂತ್ರ್ಯ ಹೋರಾಟದ ಬಗ್ಗೆ ಬಿಂಬಿಸುವ ಹಲವು ಸಾಂಸ್ಕೃತಿಕ ಕಾರ್ಯಕ್ರಮವು ಸುಂದರವಾಗಿ ಮೂಡಿಬಂತು.
ನೋಡುಗರನ್ನು ಆಕರ್ಷಿಸಿತ್ತು.ಶಿಕ್ಷಕ ವರ್ಗದವರು ಸಂಪೂರ್ಣ ಸಹಕಾರ ನೀಡಿದರು.
ಸಾರ್ವಜನಿಕರಿಗೆ ,ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಹಲವು ವಿಧಧ ಸ್ಪರ್ಧೆಗಳು ಕೂಡ ಅಚ್ಚುಕಟ್ಟಾಗಿ ನಡೆಯಿತು.