ಮುಡ್ನೂರು‌ ಮರ್ಕಂಜ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡ್ನೂರು ಮರ್ಕಂಜ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬ 77ನೇ ವರ್ಷದ ಸ್ವಾತಂತ್ರ್ಯೋತ್ಸವದ ಆಚರಣೆಯು ನಿವೃತ್ತ ಸೈನಿಕರು ಸೇನಾ ಹವಾಲ್ದಾರರು ಆಗಿರುವ ಲಕ್ಷ್ಮಣ ಕಟ್ಟೆ ಮನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ವರು ಧ್ವಜಾರೋಹಣ ಮಾಡುವ ಮುಖಾಂತರ ಆಚರಿಸಲಾಯಿತು.

ಬಳಿಕ‌ ಮಾತನಾಡಿದ ಅವರು ದೇಶದ ಹಿತ ಶಕ್ತಿ ಯನ್ನು ಕಾಪಾಡುವ ಮುಖಾಂತರ ನಮ್ಮ ಮುಂದಿನ ಮಕ್ಕಳಿಗೆ ದೇಶಾಭಿಮಾನದ ಕಿಚ್ಚನ್ನು ಹೆಚ್ಚಿಸಬೇಕು. ದೇಶಕ್ಕೆ ಗೌರವ ಕೊಡುವಂತಹ ಕೆಲಸ ಆಗಬೇಕು ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಶಾಲಾ ಅಧ್ಯಾಪಕ ವೃಂದ ಹಾಗೂ ಪೋಷಕ ವೃಂದದ ಕಡೆಯಿಂದ ಮಾಜಿ ಸೈನಿಕರಾದ ಸೇನಾ ಹವಾಲ್ದಾರರು ಲಕ್ಷ್ಮಣ ಕಟ್ಟೆ ಮನೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಪಂಚಾಯತ್ ಸದಸ್ಯರುಗಳಾದ ಗೋವಿಂದ ಅಲವು ಪಾರೆ, ಗೀತಾ ಬಳ್ಳಕಾನ, ಶಾಲಾ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಆನಂದ ಬಲ್ಕಡಿ , ಶ್ರೀಕುಮಾರ್ ಶೆಟ್ಟಿ ನಾ ಕುರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಕಾಂತ, ಇನ್ನೋರ್ವ ಮಾಜಿ ಸೈನಿಕರಾದ ಯಶೋಧರ ಕಟ್ಟೆಮನೆ ಉಪಸ್ಥಿತರಿದ್ದರು.

ಸಭಾ ಅಧ್ಯಕ್ಷತೆಯನ್ನು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಬೊಮ್ಮೇಟ್ಟಿ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರು ದೇವರಾಜ್ ಸ್ವಾಗತಿಸಿ ಸಹಶಿಕ್ಷಕಿಯರಾದ ಶ್ರೀಮತಿ ಸಾವಿತ್ರಿ ಮತ್ತು ಶ್ರೀಮತಿ ನಿಶಾ ರವರು ವಂದಿಸಿದರು. ಶಿಕ್ಷಕರಾದ ಬೆಳ್ಳಿಪ್ಪರವರು ಕಾರ್ಯಕ್ರಮ ನಿರೂಪಿಸಿದರು