ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಸ್ವಾತಂತ್ರ್ಯೋತ್ಸವವನ್ನು ಕೆವಿಜಿ ಐಪಿಎಸ್, ಕೆವಿಜಿ ಐಟಿಐ, ಕೆವಿಜಿ ಅಮರಜ್ಯೋತಿ ಪಿಯು ಕಾಲೇಜು, ಕೆವಿಜಿ ದಂತ ಮಹಾವಿದ್ಯಾಲಯ, ಕೆವಿಜಿ ತಾಂತ್ರಿಕ ವಿದ್ಯಾಲಯ ಮತ್ತು ಕೆವಿಜಿ ಪಾಲಿಟೆಕ್ನಿಕ್ ಜಂಟಿಯಾಗಿ ಆ .15 ರಂದು ಅತೀ ವಿಜೃಂಭಣೆಯಿಂದ ಆಚರಿಸಿತು.
ಈ ಸ್ವಾತಂತ್ರ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತೀಯ ಸೇನೆಯ ನಿವೃತ್ತ ಅನುಭವಿವ್ಯಕ್ತಿ ಸಾರ್ಜೆಂಟ್ ಪ್ರವೀಣ್ ಕುಮಾರ್ ಎಂ ಕೆ ಇವರು ಧ್ವಜಾರೋಹಣ ಮಾಡಿ ‘ ನಾವು ಈ ಸಂದರ್ಭದಲ್ಲಿ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಬಲಿದಾನರಾದ ಹಿರಿಯ ಜೀವಗಳನ್ನು ನೆನಪಿಸಿಕೊಳ್ಳೋಣ. ನಾವು ನಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಿ ದೇಶ ಸೇವೆಯನ್ನು ಮಾಡಬೇಕು ಜೊತೆಗೆ ವೈಯಕ್ತಿಕ ಚಾರಿತ್ರ್ಯ ದ ಕಡೆಗೆ ಗಮನ ಕೊಡಬೇಕು. ಒಗ್ಗಟ್ಟಿನಲ್ಲಿ ಬಲವಿದೆ, ಭಾರತೀಯರೆಲ್ಲರೂ ಒಟ್ಟು ಸೇರಿ ದೇಶಸೇವೆಗೆ ಮುನ್ನುಗ್ಗಬೇಕು’ಎಂದು ತಿಳಿಸಿದರು.
ಬಳಿಕ ಮಾತಾಡಿದ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ ‘ ದೇಶ ಕಟ್ಟಲು ಇಂದಿನ ವಿದ್ಯಾರ್ಥಿಗಳೇ ರೂವಾರಿಗಳು. ಆದುದರಿಂದ ವಿದ್ಯಾರ್ಥಿಗಳು ದೇಶವನ್ನು ಬಲಿಷ್ಠ ಗೊಳಿಸಬೇಕೆಂದು’ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.ಯುಕೆ ಜಿ ಯ ವಿದ್ಯಾರ್ಥಿನಿ ಹಾಜೀರಾ ಮತ್ತು ಆರನೇ ತರಗತಿಯ ವಿದ್ಯಾರ್ಥಿ ಶ್ರುತರಾಜ್ ಸ್ವಾತಂತ್ರ್ಯ ಆಚರಣೆಯ ಮಹತ್ವದ ಕುರಿತು ತಿಳಿಸಿದರು .
ಬಳಿಕ ಕೆವಿಜಿ ಐಪಿಎಸ್ ಮತ್ತು ಕೆವಿಜಿ ಅಮರ ಜ್ಯೋತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.
ಈ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ ಇಲ್ಲಿಯ ಎಕ್ಸ್ ಕ್ಯೂಟಿ ವ್ ಕೌನ್ಸಿಲ್ ಮೆಂಬರ್ ಆಗಿರುವ ಡಾ. ಕರುಣಾಕರ್ ರೈ,ಕೆವಿಜಿ ಐಪಿಎಸ್ ನ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ, ಉಪ ಪ್ರಾಂಶುಪಾಲ ದೀಪಕ್ ವೈ ಆರ್, ಕೆವಿಜಿ ಐಟಿಐ ಕಾಲೇಜಿನ ಪ್ರಾಂಶುಪಾಲ ಚಿದಾನಂದ ಬಾಳಿಲ, ಉಪ ಪ್ರಾಂಶುಪಾಲ ದಿನೇಶ್ ಮಡ್ತಿಲ, ಕೆವಿಜಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಮೋಕ್ಷ ನಾಯಕ್, ಕೆವಿಜಿ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಡಾ. ಸುರೇಶ್ , ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಶ್ರೀ ಜಯಪ್ರಕಾಶ್ ಕೆ, ಗವರ್ನರ್ ಕೌನ್ಸಿಲ್ ಮೆಂಬರ್ ಡಾ. ಮನೋಜ್ ಮತ್ತು ಪೋಷಕ ವೃಂದ, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.