ಸ.ಉ.ಹಿ.ಪ್ರಾ.ಶಾಲೆ ಸೋಣಂಗೇರಿಯಲ್ಲಿ ೭೬ನೇ ಸ್ವಾತಂತ್ರ‍್ಯೋತ್ಸವ ಆಚರಣೆ

0

ಸ.ಉ.ಹಿ.ಪ್ರಾ.ಶಾಲೆ ಸೋಣಂಗೇರಿಯಲ್ಲಿ 76ನೇ ಸ್ವಾತಂತ್ರ‍್ಯೋತ್ಸವ ಆಚರಣೆ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಪ್ರೇಮಾ ರೈ ಧ್ವಜಾರೋಹಣ ನೆರವೇರಿಸಿದರು.
ನಂತರ ಸೋಣಂಗೇರಿ ಪೇಟೆಯಲ್ಲಿ ಮಕ್ಕಳು, ಪೋಷಕರು ಹಾಗೂ ಹಳೆವಿದ್ಯಾರ್ಥಿಗಳು ಘೋಷಣೆ ಗಳೊಂದಿಗೆ ಮೆರವಣಿಗೆಯನ್ನು ನಡೆಸಿದರು. ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳು ಶಾಲಾ ಮೈದಾನದಲ್ಲಿ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಿದರು.ನಂತರ ಸಮಾರೋಪ ಸಮಾರಂಭ ನಡೆಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಪ್ರೇಮಾ ರೈ,ನಿವ್ರತ್ತ ಅಧ್ಯಾಪಕ ಅರುಳಪ್ಪನ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಿರಂಜನ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಣಂಗೇರಿ ಒಕ್ಕೂಟದ ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ಲು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕುಸುಮಾವತಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಈಶ್ವರ ನಾಯ್ಕ ಸೋಣಂಗೇರಿ, ಶಿವಪ್ರಸಾದ್ ನೀರಬಸಿರಿ, ದೀಪ ಅಜಕಳಮೂಲೆ, ಉಪಸ್ಥಿತರಿದ್ದರು. ಮಕ್ಕಳ ವಿವಿಧ ಭಾಷೆಗಳಲ್ಲಿ ಭಾಷಣ, ದೇಶಭಕ್ತಿ ಗೀತೆ ನಡೆಯಿತು. ನಂತರ ದತ್ತಿ ನಿಧಿಯನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಶಾಲೆಗೆ ಒಟ್ಟು ಆರು ಫೇನ್ ಗಳನ್ನು ದಾನಿಗಳು ನೀಡಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಶ್ರೀಮತಿ ಮಲ್ಲಿಕಾ, ಭಾಸ್ಕರ ಹೊಸಗದ್ದೆ, ಮಾಜಿ ಉಪಾಧ್ಯಕ್ಷೆ ಶ್ರೀಮತಿ ಸುಮಂಗಲಿ, ಹಿರಿಯರಾದ ಕೆ.ಕೆ.ಬಾಲಕೃಷ್ಣ, ಸಾಂತಪ್ಪ ಗೌಡ ಮೋಂಟಡ್ಕ, ಗೋಪಾಲಕೃಷ್ಣ ಸುತ್ತುಕೋಟೆ, ಮಾಜಿ ಶಾಲಾಭಿವೃದ್ಧಿ ಅಧ್ಯಕ್ಷ ಜೋಸೆಫ್, ಚಿದಾನಂದ ಕುಕ್ಕಂದೂರು, ಸಾಮಾಜಿಕ ಹೋರಾಟಗಾರ ಸತ್ಯ ಶಾಂತಿ ತ್ಯಾಗ ಮೂರ್ತಿ ಕುಕ್ಕಂದೂರು, ಸಹಶಿಕ್ಷಕಿಯರಾದ ಶ್ರೀಮತಿ ಸವಿತಾ, ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ಸವಿತಾ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರವಿಕಲಾ, ಆಶಾ ಕಾರ್ಯಕರ್ತೆ ಅನಿತಾ, ಅಂಗನವಾಡಿ ಸಹಾಯಕಿ ಅನೀಸ್, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷ ಸದಸ್ಯರುಗಳು, ಹಾಗೂ ಮಕ್ಕಳು, ಪೋಷಕರು ಹಾಗೂ ಹಳೆವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಶ್ರೀಮತಿ ಸವಿತಾ ರವರು ನೆರವೇರಿಸಿದರು.ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ವಂದಿಸಿದರು.

ಈ ಸಂದರ್ಭದಲ್ಲಿ ಶಾಲೆಗೆ ದಾನಿಗಳಾದ ದಿ.ಲಿಂಗಪ್ಪ ಮಿತ್ತಮಜಲು ಸ್ಮರಣಾರ್ಥ, ದಿ.ವಿಠಲ ಗೌಡ ನೀರಬಿದಿರೆ ಸ್ಮರಣಾರ್ಥ, ಶಾಲಾ ಮಾಜಿ ಎಸ್ ಡಿಎಂಸಿ ಅಧ್ಯಕ್ಷರಾದ ಜೋಸೆಫ್ ಎಸ್.ವಿ.ಹೊಸಗದ್ದೆ , ಗಿರಿಧರ ಗೌಡ ನಾಯರ್‌ಹಿತ್ಲು, ನಿವೃತ್ತ ಅಧ್ಯಾಪಕ ಅರುಳಪ್ಪನ್, ಮಹಾಲಕ್ಷಿö್ಮÃ ಎಲೆಕ್ಟಾçನಿಕ್ ಮಾಲಕ ಸಂಜೀವ ನಾಯಕ್, ಶ್ರೀಮತಿ ಕುಸುಮಾವತಿ ಮತ್ತು ಸಾಂತಪ್ಪ ಗೌಡ ಮೋಂಟಡ್ಕ ರಿಂದ 6 ಫ್ಯಾನ್ ಕೊಡುಗೆಯಾಗಿ ನೀಡಲಾಯಿತು.