ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಆಟಿ ಉತ್ಸವ

0

ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಆಟಿ ಉತ್ಸವವನ್ನು ಆಚರಿಸಲಾಯಿತು.

ನಿವೃತ್ತ ಭೂ ಸೇನಾ ಸೇನಾಧಿಕಾರಿ ಕ್ಯಾಪ್ಟನ್ ಸುಧಾನಂದರವರು ಧ್ವಜಾರೋಹಣಗೈದರು.

ಬಳಿಕ ವಿದ್ಯಾರ್ಥಿಗಳು ಕವಾಯತು ಪ್ರದರ್ಶನ ನೀಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಮಂಡಳಿಯ ಸಂಚಾಲಕ ಎ.ವಿ ತೀರ್ಥರಾಮರವರು ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿದರು.

ಬಳಿಕ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಗಳಾದ ಸುಧಾನಂದರವರು ಸ್ವಾತಂತ್ರೋತ್ಸವದ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಭಟ್ ತಳೂರು, ನಿರ್ದೇಶಕರುಗಳಾದ ಮಹಾವೀರ ಜೈನ್, ರಾಧಾಕೃಷ್ಣ ಶ್ರೀ ಕಟೀಲ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಇಂದ್ರೇಶ್ ಗುಡ್ಡೆ, ಮುಖ್ಯಗುರು ಗದಾಧರ ಬಾಳುಗೋಡು ಉಪಸ್ಥಿತರಿದ್ದರು.

ಶಾಲಾ ಸಹ ಶಿಕ್ಷಕಿಯವರಾದ ಶ್ರೀಮತಿ ಹೇಮಲತಾ ಹಾಗೂ ಶ್ರೀಮತಿ ದಿವ್ಯ ಕೊಪ್ಪಡ್ಕ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಮುಖ್ಯ ಗುರುಗಳಾದ ಗಧಾದರ ಬಾಳುಗೊಡು ಸ್ವಾಗತಿಸಿ, ಸಹ ಶಿಕ್ಷಕಿ ಪಲ್ಲವಿ ವಂದಿಸಿದರು.

ನಂತರ ಆಟಿ ಉತ್ಸವದ ಪ್ರಯುಕ್ತ ಕೆಲವೊಂದು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಆಟಿ ತಿಂಗಳಲ್ಲಿ ತಿನ್ನುವ ತಿನಿಸುಗಳನ್ನು ನೀಡಲಾಯಿತು.

ಶ್ರೀಮತಿ ಇಳಾಶ್ರೀ ಕಾಳಮ್ಮನೆ ಆಟಿ ಆಚರಣೆಯ ಮಹತ್ವವನ್ನು ತಿಳಿಸಿದರು.

ಶ್ರೀಮತಿ ರೇಖಾ ಸಮಾರೋಪ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಸಂದರ್ಭದಲ್ಲಿ ಪೋಷಕ ವೃಂದದವರು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.