ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಗ್ರದಲ್ಲಿ ಸ್ವಾತಂತ್ರ ದಿನಾಚರಣೆ.

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಗ್ರ ದಲ್ಲಿ ಆ.15 ರಂದು 76ನೇ ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷೆ ಶ್ರೀಮತಿ ದಿವ್ಯಾ, ಉಪಾಧ್ಯಕ್ಷರಾದ ಶ್ರೀ ಮತಿ ಅಶ್ವಿನಿ, ಮುಖ್ಯ ಅತಿಥಿ ಗಳಾಗಿ ಜಯಪ್ರಕಾಶ್ ಮೊಗ್ರ, ವಸಂತ ಮೊಗ್ರ ಹಾಗೂ ಶಾಲಾ ಮುಖ್ಯ ಗುರುಗಳಾದ ಪ್ರಮೋದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಾಗೂ ಊರಿನ ಜನತೆ , ಶಿಕ್ಷಕಿಯರು, ಎಸ್ ಡಿ ಎಮ್ ಸಿ ಸದಸ್ಯರು, ಪೋಷಕ ವೃಂದದವರು ಭಾಗವಹಿಸಿದರು.
ನಂತರ ಮುಖ್ಯ ಗುರುಗಳು ಪ್ರಾಸ್ತಾವಿಕ ಮಾತುಗಳನ್ನು ಮಾತನಾಡಿದರು.

ಮುಖ್ಯ ಅತಿಥಿ ಜಯಪ್ರಕಾಶ ಮೊಗ್ರ ಸ್ವಾತಂತ್ರ ಹೇಗೆ ಬಂತು ಎಂಬುದರ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸಿದರು. ಹಾಗೇ ಮಕ್ಕಳು ಭಾಷಣ ಮಾಡಿದರು. ನಂತರ ಅದೇ ಶಾಲಾ ಶಿಕ್ಷಕಿ ಕುಮಾರಿ ಆಶ್ರೀತಾ ಮಲ್ಕಜೆ ಮಕ್ಕಳಿಗೆ ಸ್ವಾತಂತ್ರದ ಇತಿಹಾಸ ಮತ್ತು ಸ್ವಾತಂತ್ರದ ನಂತರ ದೇಶ ಹೇಗೆ ಅಭಿವೃದ್ಧಿಯಾಗಿದೆ ಎಂಬುದರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಅಧ್ಯಕ್ಷೆ ಶ್ರೀಮತಿ ದಿವ್ಯಾ ಮಕ್ಕಳಿಗೆ ಈ ದಿನದ ಮಹತ್ವ ತಿಳಿಸಿದರು.

ಶ್ರೀಮತಿ ರಮ್ಯಾ ನಿರೂಪಿಸಿ, ಶ್ರೀಮತಿ ಸೌಮ್ಯ ವಂದಿಸಿದರು.
ನಂತರ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆ ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು. ಬಳಿಕ ಸಿಹಿ ತಿಂಡಿ ಹಂಚಿ ಸಂಭ್ರಮ ಪಟ್ಟರು.