ಬೊಳುಬೈಲು ಪೀಸ್ ಸ್ಕೂಲ್ ನಲ್ಲಿ ಸ್ವಾತಂತ್ರೋತ್ಸವ ಆಚರಣೆ ಇಂದು ನಡೆಯಿತು. ಶಾಲಾ ಸಮಿತಿಯ ಅಧ್ಯಕ್ಷ ಉದ್ಯಮಿ ಪಿಎಂ ಅಬ್ದುಲ್ಲಾ ಧ್ವಜಾರೋಹಣ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಅಧ್ಯಕ್ಷರಾದ ಕೆ ಅಬೂಬಕ್ಕರ್, ಮುಖಂಡರುಗಳಾದ ಅಬ್ದುಲ್ಲಾ ಪಿ ಎಂ, ಅಲಿ ಮೌಲವಿ, ಅಬ್ಬಾಸ್, ಫಾರೂಕ್, ಶರೀಫ್, ರಮೀಜ್, ಆರ್ ಬಿ ಬಶೀರ್, ಸಂಶುದ್ದೀನ್, ಅನೀಫ್, ಮುನೀರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪಿಎಂ ಅಬ್ದುಲ್ಲಾ ಸ್ವಾತಂತ್ರ್ಯೋತ್ಸವದ ಸಂದೇಶ ಭಾಷಣವನ್ನು ಮಾಡಿದರು. ಶಾಲಾ ಪ್ರಾಂಶುಪಾಲರಾದ ಮೊಹಮ್ಮದ್ ಸೈಫುಲ್ಲಾ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ವೀರರ ಬಗ್ಗೆ ಮಾತನಾಡಿ ಅವರ ತ್ಯಾಗ ಮತ್ತು ಬಲಿದಾನದ ಕುರಿತು ಸಂದೇಶ ಭಾಷಣ ಮಾಡಿದರು.
ಶಿಕ್ಷಕರಾದ ಹಸೈನಾರ್ ದೇಶಭಕ್ತಿ ಗೀತೆಯನ್ನು ಹಾಡಿ ಅಲಿ ಮೌಲವಿಯವರು ಮಕ್ಕಳನ್ನು ಮನರಂಜಿಸಿದರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಭಾಷೆಗಳಲ್ಲಿ ಭಾಷಣ, ದೇಶಭಕ್ತಿ ಗೀತೆ,ಗಾಯನ, ಹಾಗೂ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು, ಪೋಷಕವೃಂದದವರು, ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಾಯಕ ಫವಾಝ್ ಸ್ವಾಗತಿಸಿ, ಉಪನಾಯಕ ಮೊಹಮ್ಮದ್ ಜೈಸ್ ವಂದಿಸಿದರು. ವಿದ್ಯಾರ್ಥಿಗಳಾದ ಮರಿಯಮ್ ನೂಹಾ ಹಾಗೂ ಫಾತಿಮತ್ ಸಹ್ ಲಾ ಕಾರ್ಯಕ್ರಮ ನಿರೂಪಿಸಿದರು. ಇಬ್ರಾಹಿಂ ಖಲೀಲ್ ಹಾಗೂ ಮೊಹಮ್ಮದ್ ಅಜೀಮ್ ಕುರಾನ್ ಪಠಣ ಮಾಡಿದರು.