ಗೌಡ ಸಂಘದ ವತಿಯಿಂದ ಆಟಿ ಕೂಟ

0

ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘ ರಿ, ಸುಳ್ಯ ನಗರ ಗೌಡ ಮಹಿಳಾ ಘಟಕ, ಗೌಡ ಸಮಿತಿ ಮಹಿಳಾ ಘಟಕ ಹಾಗೂ ತರುಣ ಘಟಕ ಇವುಗಳ ಜಂಟಿ ಆಶ್ರಯದಲ್ಲಿ ಸಂಭ್ರಮದ ಆಟಿಯ ಕೂಟ ಕಾರ್ಯಕ್ರಮವು ಮದುವೆಗದ್ದೆ ಭೋಜಪ್ಪ ಸಭಾಂಗಣ ಶ್ರೀ ವೆಂಕಟಮಣ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಮಹಿಳಾ ಘಟಕ ಅಧ್ಯಕ್ಷರಾದ ಶ್ರೀಮತಿ ಪುಷ್ಪಾ ರಾಧಾಕೃಷ್ಣ ಇವರು ವಹಿಸಿದ್ದರು. ಶ್ರೀಮತಿ ಶಾರದ ಲಿಂಗಪ್ಪ ಕುರುಂಜಿಯವರು ಕಾರ್ಯಕ್ರಮ ಉದ್ಘಾಟಿಸಿದರು.

ಆಟಿಯ ವಿಶೇಷತೆಯ ಬಗ್ಗೆ ಸುಳ್ಯದ ಎನ್.ಎಂ.ಸಿ ಕಾಲೇಜಿನ ಪ್ರಾಧ್ಯಾಪಕರಾದ ಡಾ . ಮಮತ ಪುರುಷೋತ್ತಮ ಮಾತನಾಡಿದರು.

ಮುಖ್ಯ ಅಥಿತಿಯಾಗಿ ಚಂದ್ರ ಕೋಲ್ಚಾರ್ , ಪಿ.ಸಿ.ಜಯರಾಮ , ರಜತ್ ಅಡ್ಕಾರ್‌, ಶೀಲಾ ಕುರುಂಜಿ, ಚಂಚಲಾಕ್ಷಿ ಐವರ್ನಾಡು ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಬಳಿಕ ವಿವಿಧ ಸರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು . ಶ್ರೀಮತಿ ಶೀಲಾ ಕುರುಂಜಿ ಸ್ವಾಗತಿಸಿ, ಶ್ರೀಮತಿ ಚಂಚಲಾಕ್ಷಿ ವಂದಿಸಿದರು. ಪ್ರಾರ್ಥನೆಯನ್ನು ಜಯಶ್ರೀ ಐವರ್ನಾಡು ಹಾಡಿದರು.

ಲತಾ ಕುದ್ದಾಜೆ ಕಾರಕ್ರಮ ನಿರೂಪಿಸಿದರು . ಆಟಿಯಾ ವಿಶೇಷ ಖಾದ್ಯಗಳನ್ನು ಸದಸ್ಯರು ತಮ್ಮ ಮನೆಯಲ್ಲಿ ತಯಾರಿಸಿ ತಂದು ಭೋಜನದ ವ್ಯವಸ್ಥೆ ಏರ್ಪಡು ಮಾಡಲಾಗಿತ್ತು.