ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಸಹಯೋಗದೊಂದಿಗೆ ವಿಜಯ ಗ್ರಾಮ ಸಮಿತಿ ಜಾಲ್ಸೂರು ಇದರ ಆಶ್ರಯದಲ್ಲಿ ಸುಳ್ಯದ ಜ್ಞಾನ ಶ್ರೀ ಕಂಪ್ಯೂಟರ್ ಕೇಂದ್ರದಲ್ಲಿ ನಡೆದ ಒಂದು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ತರಗತಿಯ ಸಮಾರೋಪ ಸಮಾರಂಭ ಆ.16 ರಂದು ಸುಳ್ಯದ ರಂಗಮಯೂರಿ ಕಲಾ ಶಾಲೆಯಲ್ಲಿ ನಡೆಯಿತು.
ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಹೆಗ್ಡೆ ಹಾಗೂ ಸುಳ್ಯ ಬ್ಯಾಂಕ್ ಆಫ್ ಬರೋಡದ ಹಿರಿಯ ವ್ಯವಸ್ಥಾಪಕ ಅಶೋಕ್ ವಿಮನ್ ರವರು ಆಗಮಿಸಿ ಕಂಪ್ಯೂಟರ್ ಕಲಿತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಬಗ್ಗೆ ಸಚಿನ್ ಹೆಗ್ಡೆ
ಮಾಹಿತಿ ನೀಡಿದರು. ಬ್ಯಾಂಕ್ ಆಫ್ ಬರೋಡದ ಸೌಲಭ್ಯಗಳ ಬಗ್ಗೆ ಅಶೋಕ್ ವಿಮಾನ್ ರವರು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಜಾಲ್ಸೂರು ಗ್ರಾಮ ಸಮಿತಿಯ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಜ್ಞಾನಶ್ರೀ ಕಂಪ್ಯೂಟರ್ ಕೇಂದ್ರದ ನಿರ್ದೇಶಕ ವೇಣುಗೋಪಾಲ ಬೆಟ್ಟಂಪಾಡಿ, ಜಾಲ್ಸುರು ಗ್ರಾಮ ಸಮಿತಿಯ ಕಾರ್ಯದರ್ಶಿ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ ಉಪಸ್ಥಿತರಿದ್ದರು.
ಜಾಲ್ಸುರು ಗ್ರಾಮ ಪಂಚಾಯಿತಿನ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ತಿರುಮಲೇಶ್ವರಿ ಆರ್ಭಡ್ಕರವರನ್ನು ಇದೇ ಸಂದರ್ಭ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.
ಜಾಲ್ಸುರು ಗ್ರಾಮ ಸಮಿತಿಯ ಸದಸ್ಯರು, ಜ್ಞಾನ ಶ್ರೀ ಕಂಪ್ಯೂಟರ್ ತರಬೇತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.