ಬಾಳುಗೋಡಿನಲ್ಲಿ ಆಟಿಡೊಂಜಿ ಕೆಸರ್ದ ಗೊಬ್ಬು ಕಾರ್ಯಕ್ರಮ

0

ವಿಶ್ವ ಯುವಕ ಮಂಡಲ ಬಾಳುಗೋಡು, ಸಂಜೀವಿನಿ ಒಕ್ಕೂಟ ಬಾಳುಗೋಡು, ನಾಗಶ್ರೀ ಫ್ರೆಂಡ್ಸ್ ಸುಳ್ಯ, ಮಿತ್ರ ಬಳಗ ಕಾಯರ್ತೋಡಿ ಸುಳ್ಯ ಕ್ಕೆ ಬಹುಮಾನ

ವಿಶ್ವ ಯುವಕ ಮಂಡಲ ಬಾಳುಗೋಡು ಇದರ ಆಶ್ರಯದಲ್ಲಿ ಆ.13 ರಂದು ಆಟಿಡೊಂಜಿ ಕೆಸರ್ದ ಗೊಬ್ಬು ಕಾರ್ಯಕ್ರಮ ಪುಣೇರಿಯಲ್ಲಿ ನಡೆಯಿತು.

ಆ ಪ್ರಯುಕ್ತ
ಸುಳ್ಯ -ಕಡಬ ತಾಲೂಕು ಮಟ್ಟದ ಪುರುಷರ
ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಹಾಗೂ ಬಾಳುಗೋಡು, ಹರಿಹರ ಪಲ್ಲತಡ್ಕ, ಐನೆಕಿದು, ಕೊಲ್ಲಮೊಗ್ರು, ಕಲ್ಮಕಾರು ತ
ಗ್ರಾಮಗಳನ್ನೊಳಗೊಂಡ ಪುರುಷರ ವಾಲಿಬಾಲ್
ಹಾಗೂ ಮಹಿಳೆಯರ ತ್ರೋಬಾಲ್ ಮತ್ತು
ವಿವಿಧ ಆಟೋಟಗಳ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು.


ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ವಿಶ್ವ ಯುವಕ ಮಂಡಲ ಬಾಳುಗೋಡು ಹಾಗೂ ದ್ವಿತೀಯ ಸ್ಥಾನವನ್ನು ಐನೆಕಿದು ಗ್ರಾಮ ಪಡೆಯಿತು.
ತೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಸಂಜೀವಿನಿ ಒಕ್ಕೂಟ ಬಾಳುಗೋಡು ಹಾಗೂ
ದ್ವಿತೀಯ ಸ್ಥಾನವನ್ನು ರೇಷ್ಮಾ ಮತ್ತು ಬಳಗ ಬಾಳುಗೋಡು ಪಡೆದರು.
ಹಗ್ಗಜಗ್ಗಾಟ ಮಹಿಳೆ ವಿಭಾಗದಲ್ಲಿ
ಪ್ರಥಮ ಬಹುಮಾನವನ್ನು ನಾಗಶ್ರೀ ಫ್ರೆಂಡ್ಸ್ ಸುಳ್ಯ ಹಾಗೂ
ದ್ವಿತೀಯ ಸ್ಥಾನವನ್ನು ಸಂಜೀವಿನಿ ಒಕ್ಕೂಟ ಬಾಳುಗೋಡು ಪಡೆಯಿತು.
ಹಗ್ಗಜಗ್ಗಾಟ ಪುರುಷ ಪಂದ್ಯದಲ್ಲಿ
ಪ್ರಥಮ ಬಹುಮಾನವನ್ನು ಮಿತ್ರ ಬಳಗ ಕಾಯರ್ತೋಡಿ ಸುಳ್ಯ ಪಡೆದರೆ
ದ್ವಿತೀಯ ಸ್ಥಾನವನ್ನು ಆದಿಲಕ್ಷ್ಮೀ ಬಳಗ ಕಾಯರ್ತೋಡಿ ಸುಳ್ಯ ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಿತು.
ಯುವಕ ಮಂಡಲದ ಅಧ್ಯಕ್ಷ
ರಾಜೇಶ್ ಕಿರಿಭಾಗ ಅಧ್ಯಕ್ಷತೆ ವಹಿಸಿದ್ದರು.
ಅತಿಥಿ ಸ್ಥಾನದಲ್ಲಿ ಸುಂದರ ಮುಚ್ಚಾರ,
ವಸಂತ ಕಿರಿಭಾಗ, ರಾಧಾಕೃಷ್ಣ ಕಟ್ಟೆಮನೆ, ನಾಗವೇಣಿ ಬಾಳುಗೋಡು ಉಪಸ್ಥಿತರಿದ್ದರು.

ಹಾರ್ದಿಕ್ ಕಿರಿಭಾಗ ಸ್ವಾಗತಿಸಿ, ಲೋಹಿತ್ ಮುಚ್ಚಾರ ವಂದಿಸಿದರು. ಅಜೇಯ ಪೊಯ್ಯಮಜಲು ಕಾರ್ಯಕ್ರಮ ನಿರೂಪಿಸಿದರು.