ಪುತ್ತೂರು ಗೃಹರಕ್ಷಕರಿಂದ ವನಮಹೋತ್ಸವ
ನಿರಂತರವಾಗಿ ಪರಿಸರದ ಮೇಲೆ ಉಂಟಾಗುತ್ತಿರುವ ದೌರ್ಜನ್ಯದಿಂದಾಗಿ ಪರಿಸರದಲ್ಲಿ ಬದುಕು ಕಟ್ಟಿಕೊಂಡಿರುವ ಜೀವ ಸಂಕುಲಗಳು ನಾಶವಾಗಿ, ಪರಿಸರದ ಸಮತೋಲನ ತಪ್ಪಿ ಹೋಗುತ್ತಿದೆ. ಜೈವಿಕ ಸರಪಳಿ ನಾಶವಾಗಿ ಹಲವಾರು ವಿರಳ ಗಿಡಸಸ್ಯಗಳು ಮತ್ತು ಪ್ರಾಣಿ ಸಂಕುಲಗಳು ನಾಶವಾಗಿ ಹೋಗುತ್ತಿದೆ.
ಈ ನಿಟ್ಟಿನಲ್ಲಿ ನಾವೆಲ್ಲಾ ಕೂಡಲೇ ಎಚ್ಚೆತ್ತುಕೊಂಡು ಗಿಡಗಳನ್ನು ನೆಟ್ಟು ಮರಗಳನ್ನು ಪೋಷಿಸಿ ಪರಿಸರವನ್ನು ರಕ್ಷಿಸಬೇಕು. ಹಾಗಾದರೆ ಮಾತ್ರ ನಾಡು ಸಮೃದ್ಧವಾಗಿ ಕಾಲಕಾಲಕ್ಕೆ ಮಳೆ, ಬಿಸಿಲು ಸರಿಯಾಗಿ ದೊರಕಿ, ಪರಿಸರ ಮಾಲಿನ್ಯ ನಿವಾರಣೆಯಾಗಿ ಹಾಗೂ ಪರಿಸರ ನಾಶವಾಗುವುದು ತಪ್ಪಿ ಹೋಗಿ ಸುದೃಢ, ಸುಭೀಕ್ಷ ನಾಡು ನಿರ್ಮಾಣವಾಗಬಹುದು ಎಂದು ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು.
ಆ. 20ರಂದು ಪುತ್ತೂರು ಗೃಹರಕ್ಷಕ ದಳ ವತಿಯಿಂದ ಕೊಂಬೆಟ್ಟು ಸರ್ಕಾರಿ ಶಾಲೆಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ಘಟಕದ ಘಟಕಾಧಿಕಾರಿ ಶ್ರೀ ಅಭಿಮನ್ಯು ರೈ, ಹಿರಿಯ ಗ್ರಹ ರಕ್ಷಕರಾದ ಶ್ರೀ ಜಗನ್ನಾಥ, ಸುದರ್ಶನ್ ಜೈನ್ ಹಾಗೂ ಇನ್ನಿತರ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.