ಕಲ್ಚೆರ್ಪೆ : ಅರಣ್ಯ ಕಸ ಡಪ್ಪಿಂಗ್ ಮಾಡಿ ಮಣ್ಣು ಮುಚ್ಚಿದ ವಿಷಯಕ್ಕೆ ಸಂಬಂಧಿಸಿ ಸ್ಥಳೀಯರಿಂದ ಪ್ರತಿಭಟನೆ ಎಚ್ಚರಿಕೆ

0

ಕಸ ತೆರವುಗೊಳಿಸಿದ ನಗರ ಪಂಚಾಯತ್

ಸುಳ್ಯ ನಗರದ ಕಸವನ್ನು ನ.ಪಂ. ಕಲ್ಚೆರ್ಪೆಯ ಅರಣ್ಯ ಭಾಗದಲ್ಲಿ ‌ಡಂಪಿಂಗ್ ಮಾಡಿ, ಸ್ಥಳೀಯರ ಪ್ರತಿಭಟನೆಯ ಬಳಿಕ ಅದನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿ ಬಳಿಕ ಕಸದ ಮೇಲೆ ಮಣ್ಣು ಮುಚ್ಚಿದ ವಿಷಯಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿಗಳು ತೀವ್ರ ಪ್ರತಿಭಟನೆ ಮಾಡುವುದಾಗಿ ಪತ್ರಿಕಾಗೋಷ್ಠಿ ಮೂಲಕ ಎಚ್ಚರಿಕೆಯನ್ನು ನೀಡಿದ್ದರು.

ಆ ಬಳಿಕ ಸಂಬಂಧಪಟ್ಟವರು ಕಸದ ರಾಶಿಗೆ ಮುಚ್ಚಿದ ಮಣ್ಣನ್ನು ತೆರವುಗೊಳಿಸಿ ಸ್ಥಳದಿಂದ ಕಸವನ್ನು ವಿಲೇವಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದೀಗ ಅದೇ ಪ್ರದೇಶದಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ನಾಲ್ಕು ದಿನಗಳಿಂದ ಕಸ ಬರ್ನಿಂಗ್ ಮಾಡುವ ಮಿಷಿನಿನಲ್ಲಿ ಬೃಹತ್ ಹೋಗೆ ಹೊರಬರುತ್ತಿದ್ದು ಸ್ಥಳೀಯ ಪರಿಸರ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಬರ್ನಿಂಗ್ ಮಷೀನಿನಲ್ಲಿ ತಾಂತ್ರಿಕ ತೊಂದರೆ ಇಂದ ಈ ರೀತಿಯಾಗಿ ಹೊಗೆ ಬರಲು ಕಾರಣವಾಗುತ್ತಿರಬಹುದು ಎಂದು ಅಭಿಪ್ರಾಯ ಪಟ್ಟಿರುವ ಸ್ಥಳೀಯರು ಇದರಿಂದ ಸ್ಥಳೀಯ ಪರಿಸರದಲ್ಲಿ ಇಲ್ಲಿಯ ನಿವಾಸಿಗಳಿಗೆ ಹೊಗೆಯ ವಾಸನೆಯಿಂದ ದಮ್ಮು ಕಟ್ಟುವ ವಾತಾವರಣದಿಂದ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಇದೇ ಪರಿಸ್ಥಿತಿ ಮುಂದುವರಿದಲ್ಲಿ ನಿವಾಸಿಗಳಿಗೆ ಮಾರಕ ರೋಗಗಳು ಬರಬಹುದೆಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.