ಉರಿಮೈ ಕುರಲ್ ಯೂ ಟ್ಯೂಬ್ ಚಾನೆಲ್ ಲೋಕಾರ್ಪಣೆ
ರೆಪ್ಕೋ ಬ್ಯಾಂಕ್ ಡೆಲಿಗೇಟ್ ಸದಸ್ಯರ ವತಿಯಿಂದ ಸಾಧಕ ತಮಿಳು ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಹೋಟೆಲ್ ಸದರ್ನ್ ರೆಸಿಡೆನ್ಸಿ ಸಭಾಂಗಣದಲ್ಲಿ ಆ.20 ರಂದು ನಡೆಯಿತು.
ಮಂಗಳೂರು ಕದ್ರಿ ಟ್ರಾಪಿಕ್ ಪೊಲೀಸ್ ಸ್ಟೇಷನ್ ಸಬ್ ಇನ್ಸ್ ಪೆಕ್ಟರ್ ಆರ್.ವಿಜಯರಾಜ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ತೆಪ್ಕೋ ಬ್ಯಾಂಕ್ ಡಿಲಿಗೇಟ್ ಸದಸ್ಯ ತಂಗವೇಲು ಟಿ.ಎಸ್.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರೆಪ್ಕೊ ಬ್ಯಾಂಕ್ ಡೆಲಿಗೇಟ್ ಸದಸ್ಯ ಪೆರುಮಾಳ್ ರವರು ಉರಿಮೈ ಕುರುಲ್ ಯೂ ಟ್ಯೂಬ್ ಚಾನೆಲ್ ಲೋಕಾರ್ಪಣೆಗೊಳಿಸಿದರು.
ತಮಿಳುನಾಡಿನ ಭಾಸ್ಕರನ್ ಅವರು ದಿಕ್ಸೂಚಿ ಭಾಷಣ ಮಾಡಿದರು.
2022-23 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಶೇ.65 ಅಂಕ ಗಳಿಸಿದ 42 ವಿದ್ಯಾರ್ಥಿಗಳಿಗೆ ಮತ್ತು ಪಿಯುಸಿಯ 29 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ರಾಜ್ಯ,ರಾಷ್ಟ್ರಮಟ್ಟದಲ್ಲಿ ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಮಂಗಳೂರು ಬೈಕಂಪಾಡಿ ಶ್ರೀರಾಮ ಫ್ಯಾಬ್ರಿಕೇಷನ್ ನ ಕೈಗಾರಿಕೋದ್ಯಮಿ ಪಿ.ಎಸ್.ರಮಣ್, ಸುಳ್ಯದ ಇಂಜಿನಿಯರ್ ಮಣಿಕಂಠ, ಬೆಂಗಳೂರಿನ ಐ.ಎ.ಟಿ.ಎಫ್ ಆಡಿಟರ್ ಸುಂದರ್ ಡಿ.ಪುತ್ತೂರು ಪ್ರಭೂಸ್ ಕೇರ್ ಮತ್ತು ಕ್ಯೂರ್ ಸ್ಪೆಷಾಲಿಟಿ ಕ್ಲಿನಿಕ್ ನ ಡಾ.ಪ್ರಭು ಉಪಸ್ಥಿತರಿದ್ದರು.
ರೆಪ್ಕೊ ಬ್ಯಾಂಕ್ ಡೆಲಿಗೇಟ್ ಸದಸ್ಯ ಹಾಗೂ ದ.ಕ.ತಮಿಳು ಸೇವಾ ಸಂಘದ ಸ್ಥಾಪಕಾಧ್ಯಕ್ಷ ಪೆರುಮಾಳ್ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ರಮೇಶ್ ಮೆದಿನಡ್ಕ ಮತ್ತು ಮುತ್ತುಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ರೆಪ್ಕೊ ಡೆಲಿಕೇಟ್ ಸದಸ್ಯರಾದ ಮಹೇಶ್ವರನ್,ವಿ.ಗಣೇಶ್, ಪದ್ಮನಾಥನ್, ತ್ಯಾಗರಾಜ್ ಉಪಸ್ಥಿತರಿದ್ದರು.