ಆಲೆಟ್ಟಿ ಗ್ರಾಮದ ಕುಂಭಕೋಡು ನಿವಾಸಿ ಚಿದಾನಂದ ನಾಯಕ್ ರವರ ಪುತ್ರ ವಿಜಯ್ ಕುಮಾರ್ ರವರು ಅಲ್ಪ ಕಾಲದ ಅಸೌಖ್ಯದಿಂದ
ಆ.20 ರಂದು ನಿಧನರಾದರು.
ಅವರಿಗೆ 39 ವರ್ಷ ವಯಸ್ಸಾಗಿತ್ತು.
ಮೃತರು ತಂದೆ,
ತಾಯಿ ಶ್ರೀಮತಿ ಶಾಂತಿ, ಸಹೋದರರಾದ ವಿನಯ್ ಚಂದ್ರ, ಅಜಯ್ ,ಮುರಳಿ ಕುಂಭಕೋಡು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಅವಿವಾಹಿತರಾಗಿದ್ದು ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆಂದು ತಿಳಿದು ಬಂದಿದೆ. ಮಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಆರೋಗ್ಯ ಇಲಾಖೆಯ ಉದ್ಯೋಗಿ.