ಜೆಜೆಎಂ ಅನುಷ್ಠಾನ ಆಗದಿರುವ ಕುರಿತು ವಿವರಣೆಗೆ ಪ್ರತ್ಯೇಕ ಸಭೆ
ಪೆರಾಜೆ ಗ್ರಾಮ ಸಭೆ
ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ 2023-24 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಚಂದ್ರಕಲಾರ ಅಧ್ಯಕ್ಷತೆಯಲ್ಲಿ ಪೆರಾಜೆಯಲ್ಲಿ ನಡೆಯಿತು.
ಅಕ್ಷರದಾಸೋಹ ಸಹಾಯಕ ನಿರ್ದೇಶಕ ಹೇಮಂತ್ ನೋಡೆಲ್ ಅಧಿಕಾರಿಯಾಗಿದ್ದರು.
ಪಂಚಾಯತ್ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಸದಸ್ಯರುಗಳಾದ ಉದಯಚಂದ್ರ ಕುಂಬಳಚೇರಿ, ಸುಭಾಷ್ ಚಂದ್ರ, ಪಿ.ಎಲ್.ಸುರೇಶ್, ಪ್ರವೀಣ್ ಮಜಿಕೋಡಿ, ಪೂರ್ಣಿಮಾ ಕುಂಡಾಡು, ಚಂದ್ರಾವತಿ ಪೆರಾಜೆ, ಭೂದೇವಿ ಪೆರಾಜೆ, ಜಯಲಕ್ಷ್ಮಿ ಧರಣೀಧರ, ಪೆರಾಜೆ ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಹಾಗೂ ಇಲಾಖಾಧಿಕಾರಿಗಳು ಇದ್ದರು.
ಪೆರಾಜೆ ಗ್ರಾಮದಲ್ಲಿ ಜೆಜೆಎಂ ಅನುಷ್ಠಾನ ಬಾಕಿ ಇರುವ ವಿಚಾರ, ಪೆರಾಜೆ ಶಾಲೆಗಳಲ್ಲಿ ಶಿಕ್ಷಕರು ಸರಿಯಾದ ಸಮಯಕ್ಕೆ ಬಾರದಿರುವ ವಿಚಾರ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಮಗಾರಿ ಬಾಕಿ, ಕುಂಡಾಡು ರಸ್ತೆ ಸಮಸ್ಯೆ, ಆನೆ ದಾಳಿಯಿಂದ ಕೃಷಿ ಹಾನಿಗೆ ಪರಿಹಾರ, ಲೈನ್ ಮ್ಯಾನ್ ಸಮರ್ಪಕ ಕೆಲಸ ನಿರ್ವಹಿಸಿದರುವ ವಿಚಾರ, 1 ಟು 5 ಹೀಗೆ ಹಲವು ಗಳ ಕುರಿತು ಅಧಿಕಾರಿಗಳಲ್ಲಿ ಗ್ರಾಮಸ್ಥರು ಪ್ರಶ್ನೆ ಇಟ್ಟರು. ಪಿಡಿಒ ಮಹಾದೇವ ಪ್ರಭು ವರದಿ ವಾಚಿಸಿದರು.