ಸೆ.1: ಸುಳ್ಯ ರಾಘವೇಂದ್ರ ಮಠದಲ್ಲಿ 352 ನೇ ವರ್ಷದ ರಾಯರ ಆರಾಧನಾ ಮಹೋತ್ಸವ

0

ಸುಳ್ಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ರಾಯರ 352 ನೇ ವರ್ಷದ ಆರಾಧನಾ ಮಹೋತ್ಸವ ವು ಸೆ.1 ರಂದುನಡೆಯಲಿರುವುದು.

ಈ ಸಂದರ್ಭದಲ್ಲಿ ಬೆಳಗ್ಗೆ ಗರ್ಭಗುಡಿಯ ಬಾಗಿಲಿಗೆ ಹಿತ್ತಾಳೆ ಕವಚ ಸಮರ್ಪಣೆಯಾಗಲಿರುವುದು. ವೈದಿಕ ಕಾರ್ಯಕ್ರಮದ ಅಂಗವಾಗಿ ಗಣಪತಿ ಹವನ ,ಪವಮಾನ ಹೋಮ, ಪವಮಾನ ಅಭಿಷೇಕ, ಬ್ರಾಹ್ಮಣಾರಾಧನೆಯಾಗಿ ಮಹಾಪೂಜೆ ನಡೆದು ಮಂತ್ರಾಕ್ಷತೆ ಯೊಂದಿಗೆ ಪ್ರಸಾದ ವಿತರಣೆ ಯಾಗಲಿರುವುದು.


ಬೆಳಗ್ಗೆ 11.00 ರಿಂದ ರಾಜೇಶ್ ಮೇನಾಲ ಇವರಿಂದ “ಮಾರುತಿ ಮಹಿಮೆ” ಎಂಬ ಹರಿಕಥಾ ಕಾಲಕ್ಷೇಪ ನಡೆಯಲಿದೆ. ಮಧ್ಯಾಹ್ನ ಅನ್ನ ಸಂತರ್ಪಣೆಯಾಗಲಿದೆ.


ಸಂಜೆ ಸಮಯದಲ್ಲಿ ಭಜನಾ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಸೇವೆ,ತೊಟ್ಟಿಲು ಸೇವೆ,ಅಷ್ಟಾವಧಾನ ಸೇವೆಯಾಗಿ ಮಹಾಪೂಜೆ ನಡೆದು ಪ್ರಸಾದ ವಿತರಣೆ ಯಾಗಲಿರುವುದು. ಆರಾಧನಾ ಮಹೋತ್ಸವ ದ ಪ್ರಯುಕ್ತ ರಾತ್ರಿ ಅನ್ನ ಸಂತರ್ಪಣೆಯು ನಡೆಯಲಿರುವುದು ಎಂದು ಮಠದ ಬೃಂದಾವನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ
ಶ್ರೀಕೃಷ್ಣ ಸೋಮಯಾಗಿ ಯವರು ತಿಳಿಸಿದರು.