ಕಾಂಗ್ರೆಸ್ ನಲ್ಲಿ ಉಚ್ಛಾಟನೆ, ಅಮಾನತು, ಶೋಕಾಸ್ ನೋಟೀಸ್ ಗಳು ಮುಗಿದ ಅಧ್ಯಾಯ : ಎಂ.ವೆಂಕಪ್ಪ ಗೌಡ

0

ಸುಳ್ಯ ಕಾಂಗ್ರೆಸ್ ನೊಳಗಿನ ಉಚ್ಛಾಟನೆ, ಅಮಾನತು, ಶೋಕಾಸ್ ನೋಟೀಸುಗಳು ಮುಗಿದ ಅಧ್ಯಾಯಗಳಾಗಿವೆ ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡರು ಹೇಳಿದ್ದಾರೆ.


   ಇಂದು ಗೃಹಲಕ್ಷ್ಮಿ ಯೋಜನೆ ಹಾಗೂ ಕಸ್ತೂರಿ ರಂಗನ್ ವರದಿಯ ವಿಚಾರವಾಗಿ ಹೇಳಲು ಪತ್ರಿಕಾಗೋಷ್ಠಿ ಕರೆದಿದ್ದ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ, ಉತ್ತರಿಸಿದ ಅವರು, “; ಅದೆಲ್ಲ ಮುಗಿದ ಅಧ್ಯಾಯ. ಮೊನ್ನೆ ನಾನು ಕೆ.ಪಿ.ಸಿ.ಸಿ. ಅಧ್ಯಕ್ಷರಿಗೆ ಆ ಬಗ್ಗೆ ಮನವಿ ನೀಡಿದಾಗ, ಅಮಾನತು ಉಚ್ಛಾಟನೆಗಳನ್ನು ತೆರವುಗೊಳಿಸಬೇಕೆಂದು ಅವರು ಬರೆದು ಕೊಟ್ಟಿದ್ದಾರೆ. ಅದರ ಅಧಿಕೃತ ಆದೇಶ ಬತಲು ಬಾಕಿ ಇದೆ ಅಷ್ಟೆ. ಅದೆಲ್ಲ ಆದ ಬಳಿಕವೇ ನಾನು ಅವರೆಲ್ಲರನ್ನು ಜತೆಗೆ ಸೇರಿಸಿಕೊಂಡು ಪಕ್ಷ ಸಂಘಟನೆ ನಡೆಸುತ್ತಿದ್ದೇನೆ.  ಬ್ಲಾಕ್ ಅಧ್ಯಕ್ಷರಿಗೆ ಕೂಡ ಅದು ತಿಳಿದಿದೆ.


ನಾವೆಲ್ಲರೂ ನಮ್ಮ ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ ” ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನ.ಪಂ.ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಡೇವಿಡ್ ಧೀರ ಕ್ರಾಸ್ತ , ಎಂ.ಜೆ.ಶಶಿಧರ್, ಭವಾನಿಶಂಕರ್ ಕಲ್ಮಡ್ಕ, ಸತ್ಯಕುಮಾರ್ ಆಡಿಂಜ,ಮತ್ತು ಕೆ.ಗೋಕುಲದಾಸ್ ರವರು ಉಪಸ್ಥಿತರಿದ್ದರು.