ಮನುಷ್ಯನಿಗೆ ಭಗವಂತ ಅಗತ್ಯಕ್ಕಿಂತ ಹೆಚ್ಚು ಕೊಟ್ಟಿದ್ದಾನೆಂದರೆ ಅಗತ್ಯ ಇರುವವರಿಗೆ ಕೊಡಲೆಂದೇ ಕೊಟ್ಟಿದ್ದಾನೆ
ಚಾತುರ್ಮಾಸ್ಯ ಪ್ರಯುಕ್ತ ನಡೆಯುತ್ತಿದ್ದ ಸಾಂಸ್ಕೃತಿಕ ಸಮಾರೋಪದಲ್ಲಿ ವಿದ್ಯಾಪ್ರಸನ್ನ ಶ್ರೀಗಳು
ಭಗವಂತ ಬೇರೆ ಬೇರೆ ದೇವತೆಗಳನ್ನು ಇಟ್ಟುಕೊಂಡು ಬೇರೆ ಬೇರೆ ಶಕ್ತಿ ನೀಡಿ ಜಗತ್ತನ್ನು ಕಾಪಾಡುತ್ತಾನೆ. ಅದರಲ್ಲಿ ಶೇಷನೂ ಒಂದು ಶಕ್ತಿ. ನಾಗನ ಆರಾಧಾನೆಯಿಂದ ಸಂತತಿಗೆ ಸಂಬಂಧಿಸಿದ ದೋಷ ನಿವಾರಣೆಯಾಗಿ ಸಂತತಿ ಪ್ರಾಪ್ತಿಯಾಗುತ್ತದೆ ಎಂದು ಶ್ರೀ ವಿದ್ಯಾಪ್ರಸನ್ನ ತೀರ್ಥ ರು ನುಡಿದರು.
ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ೨೭ನೆಯ ಚಾತುರ್ಮಾಸ್ಯ ಪ್ರಯುಕ್ತ ನಡೆಯುತಿದ್ದ ಸಾಂಸ್ಕೃತಿಕ ವೈಭವ ಆ.೨೧ ರಂದು ಸಮಾರೋಪದಲ್ಲಿ ಸಮಾರಂಭದಲ್ಲಿಅವರು ಮಾತನಾಡುತಿದ್ದರು.
ನಾವುಗಳು ಯಾರಿಗೂ ನೋಯಿಸದೆ, ಎಲ್ಲರಿಗೂ ಸಂತೋಷ ನೀಡಿ ಬದುಕುವುದು ನಮ್ಮೆಲ್ಲರ ಕರ್ತವ್ಯ. ಮನುಷ್ಯನಿಗೆ ಭಗವಂತ ಬೇಕಿದ್ದಕಿಂತ ಹೆಚ್ಚು ಕೊಟ್ಟಿದ್ದಾನೆ ಎಂದರೆ ಅಗತ್ಯ ಇರುವವರಿಗೆ ಕೊಡಲೆಂದೇ ಕೊಟ್ಟಿದ್ದಾನೆ ಎಂದರ್ಥ ಎಂದು ಶಾಸ್ತ್ರ ಹೇಳುತ್ತದೆ ಎಂದರು. ಹಿಂದೂ ರಾಷ್ಟ್ರದಲ್ಲಿ ನಾವು ಅಲ್ಪ ಸಂಖ್ಯಾತರಾಗ ಬಾರದು. ಕೆಲವೊಂದು ರಾಜ್ಯದಲ್ಲಿ ನಮ್ಮವರು ಅಪಾಯಕಾರಿ ಸ್ಥಿತಿಯಲ್ಲಿದ್ದಾರೆ. ಮುಂದಿನ ಜೀವನ ದುಖಕರ ವಾಗಬಾರದೆಂದಾರೆ ಸಮಗ್ರ ಹಿಂದುಗಳು ಒಗ್ಗಟ್ಟಾಗಿರ ಬೇಕು ಜಾಗೃತವಾಗಿರಬೇಕು ಎಂದು ನುಡಿದರು.
ಆ.೧೩ ರಂದು ಆರಂಭಗೊಂಡಿದ್ದ ಸಾಂಸ್ಕೃತಿಕ ವೈಭವ ವಿವಿಧ ಸಾಂಸ್ಕೃತಿಕ, ಕಲಾ ಪ್ರಕಾರಗಳ ಕಾರ್ಯಕ್ರಮ ಆಯೋಜಿಸಲಾಗಿದ್ದು ೨೧ ರಂದು ಸಮಾರೋಪ ಗೊಂಡಿತು.