ಕೆ.ವಿ.ಜಿ. ಮೆಡಿಕಲ್ ಕಾಲೇಜು ಸಹ ಸಂಸ್ಥೆಗಳ ಕ್ರೀಡಾಕೂಟ

0

ಕೆ.ವಿ.ಜಿ. ಮೆಡಿಕಲ್ ಕಾಲೇಜು, ಕೆ.ವಿ.ಜಿ. ನರ್ಸಿಂಗ್ ಕಾಲೇಜು, ಕೆ.ವಿ.ಜಿ. ಫಿಷಿಯೋಥೆರಪಿ ಮತ್ತು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ಹಾಕಿ ಆಟಗಾರ ಧ್ಯಾನ್ ಚಂದ್ ರವರ ಹುಟ್ಟು ಹಬ್ಬದ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ಆ. 28ರಂದು ನಡೆಯಿತು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ‘ಶರೀರದ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಮತ್ತು ನೆನಪು ಶಕ್ತಿಯನ್ನು ವೃದ್ಧಿಸಲು ಕ್ರೀಡೆ ಸಹಾಯವಾಗಲಿದೆ. ಎಲ್ಲಾ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.

ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್, ಕಾಲೇಜಿನ ಸ್ಪೋರ್ಟ್ಸ್ ಕಾರ್ಡಿನೇಟರ್ ಡಾ. ರವಿಕಾಂತ್, ಕೆ.ವಿ.ಜಿ. ಜನರಲ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಚಂದ್ರಾವತಿ, ಕೆ.ವಿ.ಜಿ. ಫಿಷಿಯೋಥೆರಪಿ ವಿಭಾಗದ ಪ್ರಾಂಶುಪಾಲ ಸಾಯಿರಾಂ, ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ದೈಹಿಕ ನಿರ್ದೇಶಕ ಮಿಥುನ್, ಪೆಥಾಲಜಿ ವಿಭಾಗದ ಮುಖ್ಯಸ್ಥೆ ಡಾ. ನವ್ಯ, ಕಾಲೇಜಿನ ಸ್ಪೋರ್ಟ್ಸ್ ಸೆಕ್ರೆಟರಿ ಶ್ರೀಹರಿ, ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀವತ್ಸ, ಮ್ಯಾಗಜಿನ್ ಸೆಕ್ರೆಟರಿ ಲೇಖನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಫಾರ್ಮಕಾಲಜಿ ಪ್ರೊಫೆಸರ್ ಡಾ. ಸವಿನ್ ಫಿಟ್ ಇಂಡಿಯಾ ಪ್ರತಿಜ್ಞೆ ಬೋಧಿಸಿದರು.

ವಿದ್ಯಾರ್ಥಿನಿ ಕು. ಶಮಾ ಪ್ರಾರ್ಥಸಿದರು. ನಿಕ್ಷೇತ್ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.