ಸುಬ್ರಹ್ಮಣ್ಯ ಪೊಲೀಸರ ದಾಳಿ
ಕೊಲ್ಲಮೊಗ್ರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಹಣ ಪಣವಾಗಿಟ್ಟು ಲೂಡ ಆಟ ಆಡಿದರೆಂಬ ಆರೋಪದ ಮೇರೆಗೆ ಸುಬ್ರಹ್ಮಣ್ಯ ಪೊಲೀಸರು ದಾಳಿ ಮಾಡಿ ಇಬ್ಬರು ಯುವಕರನ್ನು ಕರೆದೊಯ್ದು ಬಳಿಕ ಬಿಟ್ಟ ಘಟನೆ ವರದಿಯಾಗಿದೆ.
ಅದೃಷ್ಟ ಆಟವಾದ ಲೂಡ ದಾಳವನ್ನು ಉಪಯೋಗಿಸಿ ಮೊಬೈಲ್ ನಲ್ಲಿ ಮತ್ತು ಲೂಡೋ ಬೋರ್ಡ್ ನಲ್ಲಿ ಜೂಜಾಟ ಆಟ ಆಡುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿ ಬಿಟ್ಟಿರುವುದಾಗಿ ವರದಿಯಾಗಿದೆ.