ಕಲ್ಲಾಜೆ ಬಳಿ ಹೊಂಡಕ್ಕೆ ಬಿದ್ದ ಬುಲೆಟ್

0

ಬೈಕ್ ಸವಾರನಿಗೆ ಗಂಭೀರ ಗಾಯ,ಆಸ್ಪತ್ರೆಗೆ ದಾಖಲು

ಜಾಲ್ಸೂರು ಸಮೀಪ ಕಲ್ಲಾಜೆ ಬಳಿ ಬುಲೆಟ್ ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬೃಹತ್ ಹೊಂಡಕ್ಕೆ ಬಿದ್ದಿದ್ದು ಸವಾರನಿಗೆ ಗಂಭೀರ ಗಾಯವಾದ ಘಟನೆ ಆಗಸ್ಟ್ 28 ರಂದು ಸಂಜೆ ನಡೆದಿದೆ.

ಘಟನೆಯಿಂದ ಗಾಯಗೊಂಡ ವ್ಯಕ್ತಿಯನ್ನು ಕಾಸರಗೋಡು ಜಿಲ್ಲೆಯ ಬಂದಿಯಡ್ಕ ನಿವಾಸಿ ಜೋಶ್ ಎಂದು ತಿಳಿದುಬಂದಿದೆ. ಇವರು ಕೆ ಎಲ್ 14 ಎಕ್ಸ್ 3023 ನಂಬರ್ ನ ಬುಲೆಟ್ ಬೈಕಿನಲ್ಲಿ ಸೋಣಂಗೇರಿ ರಸ್ತೆಯಿಂದ ಜಾಲ್ಸೂರು ಕಡೆ ಹೋಗುತ್ತಿದ್ದ ಸಂದರ್ಭ ಕಲ್ಲಾಜೆ ಬಳಿ ನಿನ್ನೆ ಸಂಜೆ ಸುರಿದ ಮಳೆಗೆ ಬೈಕ್ ಸ್ಕಿಡ್ ಆಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಘಟನೆಯ ಸಂದರ್ಭ ಇದೇ ರಸ್ತೆಯಲ್ಲಿ ಬರುತ್ತಿದ್ದ ಮಂಡೆಕೋಲು ನಿವಾಸಿ ಪ್ರಕಾಶ್ ಎಂಬುವವರು ಇದನ್ನು ಕಂಡು ಕೂಡಲೆ ಸ್ಥಳೀಯರ ಸಹಕಾರ ಪಡೆದು ಗಾಯಗೊಂಡು ಗುಂಡಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಟೋರಿಕ್ಷಾದಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯಿಂದ ಸವಾರನ ತಲೆಗೆ ಗಂಭೀರ ಗಾಯವಾಗಿದ್ದು ಇಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ.

ಸುಳ್ಯ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.