ಅಜ್ಜಾವರದಲ್ಲಿ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮ
ರಾಜ್ಯ ಸರಕಾರ ಉತ್ತಮ ಯೋಜನೆಯನ್ನು ಜಾರಿ ಗೊಳಿಸುತ್ತಿದ್ದು ಅದರಲ್ಲಿ ಗೃಹಲಕ್ಷ್ಮೀ ಯೋಜನೆ ಒಂದು. ಇದರ ಪ್ರಯೋಜನ ಪ್ರತಿಯೊಬ್ಬ ಮಹಿಳೆಯರು ಪಡೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಲೀಲಾ ಮನಮೋಹನ್ ಹೇಳಿದರು.
ಆ.30 ರಂದು ಗೃಹಲಕ್ಷ್ಮಿ ಯೋಜನೆಗೆ ರಾಜ್ಯದಲ್ಲಿ ಚಾಲನೆ ದೊರೆತಿದ್ದು, ಆ ಕಾರ್ಯಕ್ರಮದ ಅನುಷ್ಠಾನ ಅಜ್ಕಾವರ ಪಂಚಾಯತ್ ನಲ್ಲಿಯೂ ನಡೆದಿದ್ದು ಕಾರ್ಯಕ್ರಮ ವೇದಿಕೆಯಿಂದ ಅವರು ಮಾತನಾಡಿದರು.
ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಕಲ್ತಡ್ಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ನೋಡೆಲ್ ಅಧಿಕಾರಿಯಾಗಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್ ಯು.ಕೆ. ಗೃಹಲಕ್ಷ್ಮಿ ಯೋಜನೆಯ ವಿವರ ನೀಡಿದರು.
ಪಂಚಾಯತ್ ಉಪಾಧ್ಯಕ್ಷ ಜಯರಾಮ ಅತ್ಯಡ್ಕ, ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ, ಮಾಜಿ ಉಪಾಧ್ಯಕ್ಷೆ ಲೀಲಾ ಮನಮೋಹನ, ಹಸೈನಾರ್ ಹಾಜಿ ಗೋರಡ್ಕ, ಸದಸ್ಯರುಗಳಾದ ರಾಹುಲ್ ಅಡ್ಪಂಗಾಯ, ಶ್ವೇತ ಶಿರಾಜೆ ಮೊದಲಾದವರು ಇದ್ದರು.
ಅಜ್ಜಾವರ ಪಂಚಾಯತ್ ನ ಸಭಾಂಗಣದಲ್ಲಿ ಕಿಕ್ಕಿರಿದು ಗೃಹಲಕ್ಷ್ಮಿ ಫಲಾನುಭವಿಗಳು ಸೇರಿದ್ದರು. ಕುಳಿತುಕೊಳ್ಳಲು ಸ್ಥಳವಕಾಶ ಸಾಕಾಗದೇ ನಿಂತುಕೊಂಡೆ ಕೆಲವರು ಕಾರ್ಯಕ್ರಮ ವೀಕ್ಷಣೆ ಮಾಡಿದರು.
ಪಂಚಾಯತ್ ಆವರಣದಲ್ಲಿ ಗೃಹಲಕ್ಷ್ಮಿ ಯೋಜನೆಯ ಕುರಿತು ರಂಗೋಲಿ ಬಿಡಿಸಲಾಗಿತ್ತು. ಪಂಚಾಯತ್ ನ್ನು ಶೃಂಗಾರ ಮಾಡಲಾಗಿತ್ತು.
ಪಂಚಾಯತ್ ಪಿಡಿಒ ಎ.ಕೆ. ಜಯಮಾಲ
ಎಲ್ ಇ.ಡಿ. ಪರದೆಯ ಮೂಲಕ ಮೈಸೂರಿನಲ್ಲಿ ನಡೆದ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.