ಕರ್ನಾಟಕ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಸಂಪಾಜೆ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಲಾಗಿರುವ ಕಾರ್ಯಕ್ರಮ ದ ಉದ್ಘಾಟನೆಯನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಮತಿ ಶಕ್ತಿವೇಲು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮ ದಲ್ಲಿ ಸಭೆಯನ್ನು ಉದ್ದೇಶಿಸಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಬಿ.ಎಸ್ ಯಮುನಾ,
ಸಂಪಾಜೆ ಸಹಕಾರಿ ಕ್ರಷಿ ಪತ್ತಿ ನ ಸಂಘದ ಅಧ್ಯಕ್ಷ ಸೋಮಶೇಖರ್ ಕೊಇಂಗಾಜೆ,ತೆಕ್ಕಿಲ್ ಪ್ರತಿಷ್ಟಾನ ಅಧ್ಯಕ್ಷ ಟಿ.ಎಮ್.ಶಾಹಿದ,ಮಹಮದ್ ಕುಂಜಿ ಸಭೆಯನು ಉದ್ದೇಶಿಸಿ ಮಾತನಾಡಿದರು.ಸಭಾಂಗಣ ದಲ್ಲಿ ಫಲಾನುಭವಿಗಳು ತುಂಬಿ ತುಳುಕುತಿತ್ತು.
ಫಲಾಭವಿಗಳಿಗೆ ಮೈಸೂರಿನಲ್ಲಿ ನಡೆಯುವ ಗ್ರಹ ಲಕ್ಷ್ಮಿ ಯೋಜನೆಯ ಅನುಷ್ಠಾನಗೊಳ್ಳುದನ್ನು ವೀಕ್ಷಿಸಲು ಸಭಾಭಾವನದಲ್ಲಿ
ಎಲ್.ಇ.ಡಿ ಪರದೆಯ ವ್ಯವಸ್ಥೆ ಮಾಡಲಾಯಿತು. ಐದು ಫಲಭ ವಿಗಳಿಗೆ ಸಂಕೇತಿಕ ವಾಗಿ ವಿತರಿಸಲಾಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಪಂಚಾಯತ್ ಉಪಾಧ್ಯಕ್ಷ ಹನೀಫ್ ಎಸ್.ಕೆ ,ಸಹಕಾರಿ ಸಂಘದ ಉಪಾಧ್ಯಕ್ಷ ಮಹಮ್ಮದ್ ಕುಂಜಿ ,ಗ್ರಾಮಪಂಚಾಯತ್ ಸದಸ್ಯರು,ಪಂಚಾಯತ್ ಸಿಬ್ಬಂದಿಗಳು,
ಆಶಾ ಕಾರ್ಯಕರ್ತರು,ಅಂಗನವಾಡಿ ಕಾರ್ಯಕರ್ತೆಯರು,ಸಂಜೀವಿನಿ ಒಕ್ಕೂಟ ಸದಸ್ಯರು ಉಪಸ್ಥಿತಿದರು.ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ .ಕೆ ಹಮೀದ್ ಸ್ವಾಗತಿಸಿ ಪ್ರಾಸ್ತವಿಕ ವಾಗಿ ಮಾತನಾಡಿದರು.