ಸುಳ್ಯದಲ್ಲಿ ಶ್ರೀ ದೇವಿ ಕಾಂಡಿಮೆಂಟ್ಸ್ ಸ್ವೀಟ್ಸ್ & ಜನರಲ್ ಸ್ಟೋರ್ ಶುಭಾರಂಭ

0

ಸುಳ್ಯದ ಜೆ.ಸಿ.ರೋಡ್ ಸದರ್ನ್ ರೆಸಿಡೆನ್ಸಿಯಲ್ಲಿ ರಾಮಚಂದ್ರ ಅಟ್ಲೂರು ಕೋಡ್ತೀಲು ಇವರ ಮಾಲಕತ್ವದ ಶ್ರೀ ದೇವಿ ಕಾಂಡಿಮೆಂಟ್ಸ್ ಆ.30 ರಂದು ಶುಭಾರಂಭಗೊಂಡಿತು.

ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಬೆಳಿಗ್ಗೆ ಪುರೋಹಿತ ಅಭಿರಾಮ ಭಟ್ ರವರು ಗಣಹೋಮ ನೆರವೇರಿಸಿದರು.

ಈ ಸಂದರ್ಭದಲ್ಲಿ ಸದರ್ನ್ ರೆಸಿಡೆನ್ಸಿ ಮಾಲಕ ವಿಶ್ವನಾಥ ರಾವ್ ಕಾಂತಮಂಗಲ,ಹರಿಪ್ರಕಾಶ್ ಅಟ್ಲೂರು,ಸುಭೋದ್ ಶೆಟ್ಟಿ ಮೇನಾಲ, ಶ್ರೀಮತಿ ವಸಂತಿ ರಾಮಚಂದ್ರ, ಸುಂದರ ಗೌಡ,ವೆಂಕಪ್ಪ ಗೌಡ , ಮದುಕರ ಹಾಗೂ ಹಲವು ಜನ ಗಣ್ಯರು ಉಪಸ್ಥಿತರಿದ್ದರು.

ಇಲ್ಲಿ ಸ್ವೀಟ್ಸ್ ಮತ್ತು ದಿನಸಿ ಸಾಮಾಗ್ರಿಗಳು ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.