ಏನೆಕಲ್ಲು: ತೊಂಡಚ್ಚನ್ ಇಂಡಸ್ಟ್ರೀಸ್ ಶಾಖೆ ಶುಭಾರಂಭ

0

ತೊಂಡಚ್ಚನ್ ಇಂಡಸ್ಟ್ರೀಸ್ ಪಂಜ ಇದರ ನೂತನ ಶಾಖೆ ಏನೆಕಲ್ಲು ಬಾಲಾಡಿಯಲ್ಲಿ “ತೊಂಡಚ್ಚನ್ ಇಂಡಸ್ಟ್ರೀಸ್” ಆ.30 ರಂದು ಶುಭಾರಂಭ ಗೊಂಡಿದೆ. ಮುಂಜಾನೆ ವೇದಮೂರ್ತಿ ಶ್ರೀ ನಾರಾಯಣ ಆಸ್ರಣ್ಣ ರವರು ಗಣಹವನ, ವೈಧಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಅನುಗ್ರಹ ಕಂಟ್ರೆಕ್ಷನ್ ನ ಮಾಲಕ ಡಾ.ರವಿ ಕಕ್ಕೆಪದವು, ಪಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ,ಪಂಜ ಗ್ರಾಮ ಪಂಚಾಯತ್ ನಿಕಟಪೂರ್ವಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಶ್ರೀಮತಿ ನಿಶಾ ವಿಜಯ ದಂಪತಿ ಮಿಂಚಿಪದವು, ಶ್ರೀಮತಿ ಸಂಧ್ಯಾ ನಾರಾಯಣ ಕೃಷ್ಣನಗರ, ಮಹಮ್ಮದ್ ಕುಂಞಿ , ಸಂಸ್ಥೆಯ ಮಾಲಕರಾದ ಶ್ರೀಮತಿ ಆಶಾ ಮನು ಎಂ ದಂಪತಿ, ಸಿಬ್ಬಂದಿ ವರ್ಗದವರು, ಮೊದಲಾದವರು ಉಪಸ್ಥಿತರಿದ್ದರು.