ಇಂದು (ಅ.31) ಅಜ್ಜಾವರದ ಅಡ್ಕ ದಲ್ಲಿ ಐತಿಹಾಸಿಕ ಝೈನಿಯಾ ಮಜ್ಲಿಸುನ್ನೂರ್

0

ಪ್ರಖ್ಯಾತ ಅಹ್ಲ್ ಬೈತ್ ಕಣ್ಮನಿ ಶರಫುದ್ದೀನ್ ತಂಙಳ್ ಸಾಲ್ಮಾರ ನೇತೃತ್ವ

ಝೈನ್ ಎಕ್ಸೆಲೆನ್ಸ್ ಫಾರ್ ಮೋರೆಲ್ ಎಜುಕೇಷನ್ ಎಸ್ ಕೆ ಎಸ್‌ ಎಸ್ ಎಫ್ ಅಡ್ಕ ಇರುವಂಬಳ್ಳ ಶಾಖೆ ವತಿಯಿಂದ ಪ್ರತಿ ತಿಂಗಳು ನಡೆಸಲ್ಪಡುವ ಐತಿಹಾಸಿಕ ಗ್ರಾಂಡ್ ಝೈನಿಯಾ ಮಜ್ಲಿಸುನ್ನೂರ್ ಹಾಜಿ ಎಂ ಎ ಅಬ್ದುಲ್ಲಾ ಉಸ್ತಾದ್ ಮಂಡೆಕೋಲು ರವರ ಪಾವನ ಸ್ಮರಣೆ ನೆಲೆಗೊಂಡಿರುವ ರಿಪಾಇಯ್ಯ ಮಸ್ಜಿದ್ ಅಡ್ಕದಲ್ಲಿ ಐತಿಹಾಸಿಕ ವಾಗಿ ಅಹ್ಲ್ ಬೈತ್ ನ ಕಣ್ಮನಿ ಸಯ್ಯಿದ್ ಶರಫುದ್ದೀನ್ ತಂಙಳ್ ಸಾಲ್ಮಾರ ರವರ ನೇತೃತ್ವದಲ್ಲಿ ನಡೆಯಲಿದೆ.
ಝೈನಿಯಾ ಪ್ರಾಂಶುಪಾಲರಾದ ಕೆ ಎಂ ಅಬ್ದುಲ್ಲಾ ನಿಝಾಮಿ ಉಸ್ತಾದ್ ಸಂಶುಲ್ ಉಲಮಾ ಮೌಲೀದ್ ನೇತೃತ್ವ ವಹಿಸಲಿದ್ದಾರೆ.


ಕಾರ್ಯಕ್ರಮದ ಝೈನಿಯಾ ಅಧ್ಯಕ್ಷರಾದ ಬಹು ಅನ್ವರ್ ಅಲಿ ದಾರಿಮಿ ಅಧ್ಯಕ್ಷತೆಯನ್ನು ವಹಿಸಿ ಝೈನಿಯಾ ಸಂಚಾಲಕರಾದ ಮೊಹಿದ್ದೀನ್ ಅನ್ಸಾರಿ ಸ್ವಾಗತಿಸಲಿದ್ದಾರೆ.
ಕಾರ್ಯಕ್ರಮ ಹಲವಾರು ಧಾರ್ಮಿಕ ಗಣ್ಯ ವ್ಯಕ್ತಿಗಳು ಉಪಸ್ಥಿತಿಯಲ್ಲಿ ನಡೆಯಲಿದೆ