ಪ್ರತಿಭಾ ಕಾರಂಜಿ ಜ್ಞಾನದೀಪ ಎಲಿಮಲೆ ಶಾಲೆಗೆ ಸಮಗ್ರ ಪ್ರಶಸ್ತಿ

0

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ, ಸಂಪನ್ಮೂಲ ಕೇಂದ್ರ ಸುಳ್ಯ, ಸಮೂಹ ಸಂಪನ್ಮೂಲ ಕೇಂದ್ರ ದೇವಚಳ್ಳ ಹಾಗೂ ಸ. ಹಿ. ಪ್ರಾ . ಶಾಲೆ ಕುಕ್ಕುಜಡ್ಕ ಇವರ ಆಶ್ರಯದಲ್ಲಿ ನಡೆದ ದೇವಚಳ್ಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವು ಪ್ರಶಸ್ತಿಗಳನ್ನು ಮೂಡಿಗೇರಿಸಿಕೊಂಡಿರುವ ಜ್ಞಾನದೀಪ ಎಲಿಮಲೆ ಶಾಲೆಯ ಕಿರಿಯರ ವಿಭಾಗದಲ್ಲಿ 32 ಅಂಕಗಳೊಂದಿಗೆ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಸ್ಪರ್ಧೆಗಳಲ್ಲಿ ಭಾಗವಹಿಸಿದ ಜ್ಞಾನದೀಪ ಶಾಲಾ ತಂಡ ಕಿರಿಯರ ವಿಭಾಗದ ಭಕ್ತಿ ಗೀತೆಯಲ್ಲಿ ಪೂರ್ವಿ ಅಂಬೆಕಲ್ಲು ಪ್ರಥಮ, ಅಶುಭಾಷಣ ದಲ್ಲಿ ರುತ್ವಿಕ್ ಮೆತ್ತಡ್ಕ ಪ್ರಥಮ, ಲಘು ಸಂಗೀತದಲ್ಲಿ ಪೂರ್ವಿ ಅಂಬೆಕಲ್ಲು ಪ್ರಥಮ, ಕ್ಲೇ ಮಾಡೆಲಿಂಗ್ ನಲ್ಲಿ ರುತ್ವಿಕ್ ಪ್ರಥಮ, ಇಂಗ್ಲಿಷ್ ಕಂಠಪಾಠದಲ್ಲಿ ಇಶಾನಿ ಪ್ರಥಮ, ಧಾರ್ಮಿಕ ಪಠಣದಲ್ಲಿ ನಿರಂಜನ್ ದ್ವಿತೀಯ, ಹಿಂದಿ ಕಂಠಪಾಠದಲ್ಲಿ ತೃಷಾ ಕೆ.ಹೆಚ್ ಪ್ರಥಮ, ಕನ್ನಡ ಕಂಠಪಾಠದಲ್ಲಿ ಇಶಾನಿ ದ್ವಿತೀಯ, ಭಕ್ತಿಗೀತೆಯಲ್ಲಿ ಹನಿ ಎ.ಟಿ ದ್ವಿತೀಯ, ಚಿತ್ರಕಲೆಯಲ್ಲಿ ಅಕ್ಷಯ್ ಆರ್.ಹೆಚ್ ಪ್ರಥಮ ಚಿತ್ರಕಲೆಯಲ್ಲಿ ವಿಹಾನಿ ಜೆ. ಎ ತೃತೀಯ, ಮಿಮಿಕ್ರಿಯಲ್ಲಿ ದಿಗಂತ್.ಕೆ ದ್ವಿತೀಯ, ಕವನ ವಾಚನದಲ್ಲಿ ಸಾನ್ವಿ ಪಿ. ಬಿ ತೃತೀಯ ಸ್ಥಾನಗಳಿಸಿದರು.