ಜ್ಞಾನದೀಪ ಎಲಿಮಲೆಯ ವಿದ್ಯಾರ್ಥಿ ಯೋಗದಲ್ಲಿ ವಿಭಾಗ ಮಟ್ಟಕ್ಕೆ

0

ಶಾಲಾ ಶಿಕ್ಷಣ ಇಲಾಖೆ, ದ. ಕ. ಉಪನಿರ್ದೇಶಕರ ಕಛೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ ಹಾಗೂ ಅನುದಾನಿತ ಸೆಕಂಡರಿ ಶಾಲೆ ಉಜಿರೆ ಇದರ ಆಶ್ರಯದಲ್ಲಿ ಉಜಿರೆ ಯಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ ಯಲ್ಲಿ ನಮ್ಮ ಶಾಲಾ 7 ನೇ ತರಗತಿ ವಿದ್ಯಾರ್ಥಿ ತನುಷ್. ಎಮ್. ಎಚ್. ದ್ವಿತೀಯ ಸ್ಥಾನ ಪಡೆದು ಹೆಬ್ರಿ ಯಲ್ಲಿ ನಡೆಯಲಿರುವ ವಿಭಾಗ ಮಟ್ಟದ ಸ್ಪರ್ಧೆ ಗೆ ಅರ್ಹತೆಯನ್ನು ಪಡೆದುಕೊಂಡಿರುತ್ತಾನೆ. ಇದುವರೆಗೆ ಇವರು ಯೋಗದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾನೆ.