ಸಂಪಾಜೆ ಗ್ರಾಮದ ಗಡಿಕಲ್ಲು ನಿವಾಸಿ ಇಬ್ರಾಹಿಂ ಮಾಸ್ತರ್ ರವರು ತಮ್ಮ ಮಗಳ ಹೆಸರಿಗೆ ಖಾತೆ ಬದಲಾವಣೆ ಮಾಡಲು ಗ್ರಾಮ ಪಂಚಾಯತಿಗೆ ಅರ್ಜಿ ನೀಡಿದ್ದು, ಸುಮಾರು ಆರು ತಿಂಗಳ ಬಳಿಕ ಗ್ರಾಮ ಪಂಚಾಯತಿ ವತಿಯಿಂದ ಖಾತೆ ಬದಲಾವಣೆ ಮಾಡಿ ದಾಖಲೆಪತ್ರಗಳನ್ನು ಇಬ್ರಾಹಿಂ ಮಾಸ್ತರ್ ಅವರಿಗೆ ಆ.31ರಂದು ಹಸ್ತಾಂತರ ಮಾಡಲಾಯಿತು.
ಗ್ರಾಮ ಪಂಚಾಯತಿಗೆ ಇಬ್ರಾಹಿಂ ಮಾಸ್ತರ್ ಅವರು ಜಾಗದ ಖಾತೆ ಬದಲಾವಣೆಗೆ ಅಗತ್ಯವಿರುವ ಎಲ್ಲಾ ದಾಖಲೆ ಯನ್ನು ನೀಡಿದ್ದರೂ ಗ್ರಾಮ ಪಂಚಾಯತಿ ವಿಳಂಬ ಧೋರಣೆ ಮಾಡಿದ್ದರಿಂದ ಆ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದಿ ಅಧಿಕಾರಿಯಾಗಿದ್ದ ಸರಿತಾ ಒಲ್ಗೊ ಡಿಸೋಜಾ ವಿರುದ್ಧ ಸಂಪಾಜೆ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆ ಪಂಚಾಯತ್ ಮುಂಭಾಗ ಪ್ರತಿಭಟನೆಗೆ ಸಿದ್ದತೆ ನಡೆಸಿತ್ತು.
ಪ್ರತಿಭಟನೆಗೆ ಮುಂದಾದಾಗ ಸುಳ್ಯ ಆರಕ್ಷಕ ಠಾಣಾಧಿಕಾರಿ ಈರಯ್ಯ ದೂಂತೂರು ಅವರು ಘಟನಾ ಸ್ಥಳಕ್ಕೆ ಭೇಟಿ ನಿಡಿ ಪ್ರತಿಭಟನೆ ಮಾಡದಂತೆ ನಾಗರಿಕ ಹಿತರಕ್ಷಣಾ ವೇದಿಕೆಯವರಿಗೆ ಮನವಿ ಮಾಡಿತ್ತು.
ಇದಕೆ ಸ್ಪಂದಿಸಿದ ಪ್ರತಿಭಟನೆಕರಾರು ಪ್ರತಿಭಟನೆ ಹಿಂಪಡೆದಿದ್ದರು.
ಈ ಬಗ್ಗೆ ಎಸ್.ಐ. ಅವರು ಸಂಪಾಜೆ ಗ್ರಾ.ಪಂ.ಭೇಟಿ ನೀಡಿ ಪಂಚಾಯತಿ ಕಾರ್ಯದರ್ಶಿಯವರಲ್ಲಿ ಇಬ್ರಾಹಿಂ ಮಾಸ್ತರ್ ಅವರಿಗೆ ಅಗತ್ಯ ದಾಖಲೆ ಪತ್ರವನ್ನು ನೀಡುವಂತೆ ತಿಳಿಸಿದ್ದರು.
ಇಬ್ರಾಹಿಂ ಮಾಸ್ತರ್ ಅವರು ಈ ಬಗ್ಗೆ ಸುಳ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ನೀಡಿದ್ದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅವರು ಸಂಪಾಜೆ ಗ್ರಾಮ ಪಂ.ಗೆ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ದಾಖಲೆಪತ್ರದ ಪರಿಶೀಲನೆ ನಡೆಸಿದ್ದರಲ್ಲದೇ, ಗ್ರಾಮ ಪಂಚಾಯತಿ, ಹಾಗೂ ತಾಲೂಕು ಪಂಚಾಯತಿ ಸಹಕಾರದಿಂದ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದು, ಪ್ರಸ್ತುತ ದಾಖಲೆಪತ್ರವನ್ನು ಇಬ್ರಾಹಿಂ ಮಾಸ್ತರ್ ಅವರಿಗೆ ಹಸ್ತಾಂತರ ಮಾಡಲಾಯಿತು.