ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಬೆಥನಿ ವಿಶೇಷ ಮಕ್ಕಳ ಶಾಲೆಗೆ ಮಕ್ಕಳ ಮಧ್ಯಾಹ್ನದ ಅನ್ನದಾನಕ್ಕೆ ಒಂದು ವರ್ಷಕ್ಕೆ ಬೇಕಾಗುವ ಖರ್ಚಿನ ಬಗ್ಗೆ ಈ ತಿಂಗಳ ಮೊತ್ತವನ್ನು ಆ.31 ರಂದು ಹಸ್ತಾಂತರಿಸಲಾಯಿತು.
ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಪ್ರತಿ ತಿಂಗಳು ತಿಂಗಳಿಗೆ ಬೇಕಾಗುವ ಮಧ್ಯಾಹ್ನದ ಅನ್ನದಾನಕ್ಕೆ 10,000 ಮೊತ್ತವನ್ನು ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನೀಡುತ್ತಾ ಬರಲಿದೆ.
ಅನ್ನದಾನದ ದೇಣಿಗೆಯ ಪ್ರಯೋಜಕರಾಗಿ ದೀಪಕ್ .ಎಚ್ .ಬಿ, ದಿನೇಶ್ ಮೊಗ್ರ, ರಾಮಚಂದ್ರ ಪಳಂಗಾಯ, ರಂಗಯ್ಯ ಶೆಟ್ಟಿಗಾರ್ ನೀಡುತ್ತಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷ ರಾಮಚಂದ್ರ ಪಳಂಗಾಯ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ರಂಗಯ್ಯ ಶೆಟ್ಟಿಗಾರ್, ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ಬೆತನಿ ವಿಶೇಷ ಮಕ್ಕಳ ಶಾಲೆಯ ಸಂಚಾಲಕ ವಿ ಜೋಯ್, ಮುಖ್ಯ ಶಿಕ್ಷಕಿ ಶೈಲಾ ಪಿ. ಜೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲೆಯ ವಿಶೇಷ ಮಕ್ಕಳು, ಲಯನ್ಸ್ ಕ್ಲಬ್ ನ ಸದಸ್ಯರು, ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.
ಬೆತನಿ ವಿಶೇಷ ಶಾಲೆಯ ಮಕ್ಕಳು ಪ್ರಾರ್ಥನೆ ನಡೆಸಿಕೊಟ್ಟರು, ಲಯನ್ಸ್ ಕ್ಲಬ್ ಕಾರ್ಯದರ್ಶಿ ಸತೀಶ ಕೂಜುಗೋಡು ಸ್ವಾಗತಿಸಿ, ಖಜಾಂಜಿ ಚಂದ್ರಶೇಖರ ಪಾನತ್ತಿಲ ವಂದಿಸಿದರು .ವಿಮಲಾ ರಂಗಯ್ಯ ಕಾರ್ಯಕ್ರಮ ನಿರೂಪಿಸಿದರು.