ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಹೇಮಾವತಿ ಸ್ವಯಂ ನಿವೃತ್ತಿ

0

ಪ್ರಾಥಮಿಕ ಆರೋಗ್ಯ ಕೇಂದ್ರ ಆರಂತೋಡು ಇದರ ಅಧೀನದಲ್ಲಿರುವ ಪೇರಾಲು ಉಪ ಕೇಂದ್ರದ ಸುರಕ್ಷಾಧಿಕಾರಿ ಶ್ರೀಮತಿ ಹೇಮಾವತಿ ಆ. 31ರಂದು ಸ್ವಯಂ ನಿವೃತ್ತಿ ಹೊಂದಿದ್ದಾರೆ.

1988ರಲ್ಲಿ ಮಂಡೆಕೋಲು ಗ್ರಾಮದ ಪೇರಾಲು ಆರೋಗ್ಯ ಕೇಂದ್ರದಲ್ಲಿ ಸರಕಾರಿ ಸೇವೆ ಆರಂಭಿಸಿದ ಇವರು ಅಲ್ಲಿಯೇ ಸುಮಾರು 35 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.

ಮೂಲತ: ಜಾಲ್ಸೂರು ಗ್ರಾಮದ ನೆಕ್ರಾಜೆ – ಕುತ್ಯಾಳದವರಾದ ಇವರು ಪ್ರಸ್ತುತ ಕುಟುಂಬ ಸಮೇತ ಬೆಳ್ಳಾರೆಯಲ್ಲಿ ವಾಸಿಸುತ್ತಿದ್ದಾರೆ.

ಪಲ್ಲತ್ತಡ್ಕ ದಿ.ಅಣ್ಣಯ್ಯ ಗೌಡ ಮತ್ತು ದಿ. ನೀಲಮ್ಮ ದಂಪತಿಗಳ ಪುತ್ರಿಯಾಗಿರುವ ಇವರು, ನಿವೃತ್ತ ಸುಬೇದಾರ್ ಭಾಸ್ಕರ ಗೌಡ ಕುತ್ಯಾಳರವರ ಧರ್ಮಪತ್ನಿ.

ಇವರ ಪ್ರಥಮ ಪುತ್ರಿ ಡಾ. ಪಾವನ ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದಾರೆ. ಅಳಿಯ ಡಾ. ಭಾಗ್ಯೆಶ್ ರವರು ಅದೇ ಕಾಲೇಜಿನಲ್ಲಿ ಕಾಯ ಚಿಕಿತ್ಸಾ ವಿಭಾಗದಲ್ಲಿ ವಿಭಾಗ ಮುಖ್ಯಸ್ಥರಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಪ್ರದ್ಯಮ್ಮ ಮತ್ತು ಶ್ರೀಹರಿ.

ಹೇಮಾವತಿಯವರ ದ್ವಿತೀಯ ಪುತ್ರಿ ಕು. ನಮೃತ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ಸೈಕಾಲಜಿಸ್ಟ್ ಆಗಿದ್ದಾರೆ.

ತೃತೀಯ ಪುತ್ರಿ ಕು. ಚೈತ್ರ ಇಂಜಿನಿಯರಿಂಗ್ ಆಗಿ ಎಂ.ಬಿ.ಎ ಪದವಿ ಪಡೆದಿದ್ದಾರೆ.

ಹೇಮಾವತಿಯವರ ಪುತ್ರ ವಿಕಾಸ್ ಸುಳ್ಳದ ಅಮರ ಜ್ಯೋತಿ ಪಿ.ಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ.