ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ-ಬೆಳ್ಳಾರೆ ವತಿಯಿಂದ ನೆಟ್ಟಾರಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟನೆ

0

ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ ಬೆಳ್ಳಾರೆ ವತಿಯಿಂದ ಸುಳ್ಯ ತಾಲೂಕು ಮಟ್ಟದ ಸ್ವಜಾತಿ ಬಾಂಧವರ ಕೆಸರುಗದ್ದೆ ಕ್ರೀಡಾಕೂಟ ಸೆ.03 ರಂದು ನೆಟ್ಟಾರು ಕೃಷ್ಣಪ್ಪ ಮೂಲ್ಯ ಕೋಡಿಮನೆ ಇವರ ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು. ಕೃಷ್ಣಪ್ಪ ಮೂಲ್ಯ ಕೋಡಿಮನೆಯವರು ದೀಪ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿ ಶುಭಹಾರೈಸಿದರು. ಕುಲಾಲ ಸುಧಾರಕ ಸೇವಾ ಸಂಘದ ಅಧ್ಯಕ್ಷ ಶೈಲೇಶ್ ನೆಟ್ಟಾರ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಕೇಶವ ಕುಲಾಲ್, ಕಾರ್ಯದರ್ಶಿ ಚಂದ್ರಶೇಖರ ಬಸ್ತಿಗುಡ್ಡೆ ಉಪಸ್ಥಿತರಿದ್ದರು. ಶೈಲೇಶ್ ನೆಟ್ಟಾರು ಸ್ವಾಗತಿಸಿ, ಯತೀಶ್ ಕುಲಾಲ್ ಕೋರ್ಮಂಡ ಕಾರ್ಯಕ್ರಮ ನಿರೂಪಿಸಿದರು.