ಸೆ.9 : ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿ ಆಡಳಿತ ಮಂಡಳಿಗೆ ಚುನಾವಣೆ: ಮಂಡಳಿಯ 11 ಸ್ಥಾನಕ್ಕೆ 22 ಮಂದಿ ಕಣದಲ್ಲಿ

0

ಆರೀ ಜಿದ್ದಾಜಿದ್ದಿಗೆ ಕಾರಣವಾಗಿರುವ ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿಯ ಆಡಳಿತ ಮಂಡಳಿಯ ಹನ್ನೊಂದು ನಿರ್ದೇಶಕ ಸ್ಥಾನಕ್ಕೆ ಸೆ.೯ ರಂದು ಚುನಾವಣೆ ನಡೆಯಲಿದ್ದು, ರಡು ತಂಡದಿಂದ ಇಪ್ಪತ್ತೆರಡು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಒಂದು ತಂಡದಿಂದ ಅಬ್ದುಲ್ ಖಾದರ್ ಬಾಯಂಬಾಡಿ, ಅಬ್ದುಲ್ ನಾಸೀರ್ ಯು.ಎ, ಅಬ್ದುಲ್ ರಹಿಮಾನ್. ಕೆ, ಅಬ್ದುಲ್ ರಶೀದ್ ಟಿ, ಅಬೂಭಕ್ಕರ್ ಯು ಹೆಚ್(ಮಂಗಳ)ಅಜರುದ್ದೀನ್ ಯು,ಹಮೀದ್ ಹೆಚ್ ಎಂ,ಹನೀಫ್ ಎನ್,ಹಸೈನಾರ್ ಬಿ,ಹುಸೈನ್ ಸಾಹೇಬ್, ಇಸ್ಮಾಯಿಲ್ ಬಿ ಯವರು ಇನ್ನೊಂದು ತಂಡದಿಂದ ಅಬ್ದುಲ್ ಬಶೀರ್, ಅಬ್ದುಲ್ ರಹಿಮಾನ್ ತಂಬಿನಮಕ್ಕಿ , ಅಬ್ದುಲ್ ರಹಿಮಾನ್ ಬಿ ಯು,ಅಬ್ದುಲ್ ರಜಾಕ್, ಅಶ್ರಫ್ ಎನ್, ಹಮೀದ್ ಕೆ ಎಂ(ಅಲ್ಪಾ), ಹಸೈನಾರ್ ಕೆ, ಮಹಮ್ಮದ್ ಅತಾವುಲ್ಲಾ, ಮಹಮ್ಮದ್ ಕೆ ಎಂ,ಮಹಮ್ಮದ್ ಮುಸ್ತಫಾ, ಸುಲೈಮಾನ್ ರವರು ನಾಮಪತ್ರ ಸಲ್ಲಿಸಿದ್ದಾರೆ.

ಸೆ.೯ ರಂದು ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೩ ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಮತದಾನ ಮುಗಿದ ಬಳಿಕ ಅಪರಾಹ್ನ ೩ ಗಂಟೆಯಿಂದ ಮತ ಎಣಿಕೆ ನಡೆದು ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ಬೆಳ್ಳಾರೆ ಜಮಾಯತ್ ವ್ಯಾಪ್ತಿಗೆ ಒಳಪಟ್ಟ ೫೨೩ ಮಂದಿ ಮತದಾರಿದ್ದಾರೆ ಎಂದು ಚುನಾವಣಾಧಿಕಾರಿ ದ.ಕ ಜಿಲ್ಲಾ ವಕ್ಪ್ ಬೋರ್ಡ್ ಅಧಿಕಾರಿ ಅಬೂಭಕ್ಕರ್ ತಿಳಿಸಿದ್ದಾರೆ.
ಬೆಳ್ಳಾರೆ ಮಸೀದಿಯ ಆಡಳಿತ – ಮಂಡಳಿ ವಿಚಾರ ಕೆಲಸ ವರ್ಷಗಳಿಂದ ಭಾರೀ ವಿವಾದ ಪಡೆದು ಆಡಳಿತಾಧಿಕಾರಿ ನೇಮಕವಾಗಿ, ಅದೂ ಕೂಡಾ ವಿವಾದದ ರೂಪ ಪಡೆದು, ಇದೀಗ ಚುನಾವಣೆ ಘೋಷಿತವಾಗಿದೆ. ೧೧ ಸ್ಥಾನಕ್ಕೆ ಎರಡು ತಂಡದ ೨೨ ಮಂದಿ ನಾಮಪತ್ರ ಸಲ್ಲಿಸಿದ್ದು, ಪ್ರತೀ ಮನೆ ಮನೆಗೆ ಹೋಗಿ ಪ್ರಚಾರ ಕಾರ್ಯ ನಡೆಯುತ್ತಿದೆ. ಸೆ.೯ರಂದು ನಡೆಯುವ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ.